ಬಿಜೆಪಿ ಸರ್ಕಾರದ ತಪ್ಪು ತಿದ್ದೋದೇ ಕೆಲಸವಾಯ್ತು: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ

ಬಿಜೆಪಿ ಸರ್ಕಾರದ ತಪ್ಪು ತಿದ್ದೋದೇ ಕೆಲಸವಾಯ್ತು: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ

ಬೆಂಗಳೂರು: ಬಿಜೆಪಿ ಸರ್ಕಾರ ಮಾಡಿದ ಅನಾಹುತಗಳನ್ನು ಸರಿಮಾಡುವಷ್ಟರಲ್ಲೇ ಸಾಕಾಗಿ ಹೋಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಕೊತ್ತನೂರುನಲ್ಲಿ ಶುಕ್ರವಾರ ನಡೆದ ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್‍ನಲ್ಲಿ ಹೊಸದಾಗಿ ನಿರ್ಮಿಸಿರುವ ಒಟ್ಟು 65 ಎಂಎಲ್‍ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.   ಗಾರ್ಡನ್‍ ಸಿಟಿಯನ್ನು ಹಿಂದಿನ ಸರ್ಕಾರ ಗಾರ್ಬೆಜ್ ಸಿಟಿ ಮಾಡಿತ್ತು. ಪಾಲಿಕೆ ಆಸ್ತಿಗಳನ್ನು ಅಡಮಾನ ಇಟ್ಟಿದ್ದರು. ಎಲ್ಲವನ್ನೂ ಸರಿಪಡಿಸುತ್ತಿದ್ದೇವೆ ಎಂದರು. 2006 ರಲ್ಲಿ 220 ಚದರ ಕಿ.ಮೀ.ಇದ್ದ ಬೆಂಗಳೂರಿನ […]

ಶಾಸಕ ಸತೀಶ ಜಾರಕಿಹೊಳಿ ಕ್ರಿಯಾಶೀಲ ವ್ಯಕ್ತಿತ್ವದ ಸಮಾಜ ಸೇವಕ: ಧೃವನಾರಾಯಣ

ಶಾಸಕ ಸತೀಶ ಜಾರಕಿಹೊಳಿ ಕ್ರಿಯಾಶೀಲ ವ್ಯಕ್ತಿತ್ವದ ಸಮಾಜ ಸೇವಕ: ಧೃವನಾರಾಯಣ

ಚಾಮರಾಜನಗರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅಭಿನಂದನಾ ಸಮಾರಂಭ ಚಾಮರಾಜನಗರ: ಸಾಮಾಜಿಕ ಬದಲಾವಣೆಯ ಕನಸು ಕಂಡು ಮೂಢನಂಬಿಕೆಗಳ ವಿರುದ್ಧ ಸಮರ ಸಾರಿರುವ ಮತ್ತು   ಸಮಾಜಮುಖಿ ಕೆಲಸಗಳ ಮೂಲಕ ಜನಪ್ರೀತಿ ಸಂಪಾದಿಸಿರುವ ಶಾಸಕ ಸತೀಶ ಜಾರಕಿಹೊಳಿ ಕ್ರಿಯಾಶೀಲ ವ್ಯಕ್ತಿತ್ವದ ರಾಜಕಾರಣಿ ಎಂದು ಸಂಸದ ಧೃವನಾರಾಯಣ ಬಣ್ಣಿಸಿದರು. ಚಾಮರಾಜನಗರ ನಂದಿಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಮತ್ತು ಶಾಸಕ ಸತೀಶ ಜಾರಕಿಹೊಳಿ   ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಾಸಕ ಸತೀಶ್ ಜಾರಕಿಹೊಳಿ  ಅವರು ಕಡಿಮೆ ಮಾತನಾಡುತ್ತಾರೆ. […]

ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಇಂಡಿ ಗ್ರಾಮೀಣ ಠಾಣೆ ಪಿಎಸ್‍ಐ, ಒಬ್ಬ ಪೇದೆ ಅಮಾನತ್ತು

ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಇಂಡಿ ಗ್ರಾಮೀಣ ಠಾಣೆ ಪಿಎಸ್‍ಐ, ಒಬ್ಬ ಪೇದೆ ಅಮಾನತ್ತು

ವಿಜಯಪುರ: ಅಕ್ರಮ ಸಂಬಂಧ ಶಂಕಿಸಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಪಾರದರ್ಶಕವಾಗಿ ಕಾರ್ಯನಿರ್ವಹಿಸದ ಇಂಡಿ ಗ್ರಾಮೀಣ ಠಾಣೆ ಪಿಎಸ್‍ಐ ಹಾಗೂ ಒಬ್ಬ ಪೇದೆಯನ್ನು ಅಮಾನತ್ತುಗೊಳಿಸಿ ಎಸ್‍ಪಿ ಕುಲದೀಪಕುಮಾರ್‍ ಜೈನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಪಿಎಸ್‍ಐ  ಶಿವಾನಂದ ಹಾಗೂ ಪೇದೆ ಮಹೇಶ ಹುಗ್ಗೆಣ್ಣವರ್ ಅಮಾನತ್ತಾದ ಅಧಿಕಾರಿಗಳು. ಇತ್ತೀಚಿಗೆ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸಾವಿತ್ರಿ ಗೋಡ್ಯಾಳ ಎಂಬ ಮಹಿಳೆ  ಮೌಲಾಲಿ ಅಘರಖೇಡ್‍ ಜೊತೆ ಅಕ್ರಮ ಸಂಬಂ‍ಧ ಹೊಂದಿದ್ದಾಳೆ ಎಂದು ಆರೋಪಿಸಿ ಮೌಲಾಲಿ ಪತ್ನಿ ಸುಗರಾ 9 ಜನರೊಂದಿಗೆ […]

ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿಗೆ ಮತ್ತೆ ಮನವಿ ಮಾಡುತ್ತೇನೆ: ಸಚಿವ ರಮೇಶ

ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿಗೆ ಮತ್ತೆ ಮನವಿ ಮಾಡುತ್ತೇನೆ: ಸಚಿವ ರಮೇಶ

ಅಥಣಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಮತ್ತೊಮ್ಮೆ ಮನವಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನರೇಂದ್ರ ಮೋದಿ ಹಾಗೂ ಕರ್ನಾಟಕದಲ್ಲಿ ಯಡಿಯೂರಪ್ಪನವರು ಸುಳ್ಳು ಹೇಳಿ ಪ್ರಚಾರ ಪಡೆಯತ್ತಿದಾರೆ. ಆದರೆ ನಾವು ಪ್ರಚಾರ ಪ್ರಿಯರಲ್ಲ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದು ಅಭ್ಯರ್ಥಿಗಳ ಆಯ್ಕೆಗೆ ಶ್ರಮಿತ್ತೇವೆ. ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದವರಿಗೆ […]

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಶಾಸಕ ಡಾ.ಕೆ.ಸುಧಾಕರ

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ  ಶಾಸಕ ಡಾ.ಕೆ.ಸುಧಾಕರ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ರಾತ್ರಿ  ಟ್ವಿಟ್ಟರ್ ಸಂದೇಶ ನೀಡಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್, ಶುಕ್ರವಾರ ಬೆಳಗ್ಗೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಜಿಲ್ಲಾ ಪಂಚಾಯತ ಅಧ್ಯಕ್ಷ ಸ್ಥಾನದಿಂದ  ತಮ್ಮ ತಂದೆ ಪಿ.ಎನ್. ಕೇಶವರೆಡ್ಡಿ ಅವರನ್ನು ಕೆಳಗಿಳಿಸುವ ಸಂಬಂಧ ಪಕ್ಷದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳಿಗೆ ಬೇಸತ್ತು ಸುಧಾಕರ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದ್ದು, ಕಾಂಗ್ರೆಸ್ ನಾಯಕರ ಮನವೊಲಿಕೆ ನಂತರ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ. ಸಂಸದ ಕೆ.ಹೆಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ […]

ಬಂಟ್ವಾಳ ಹಿಂಸಾಚಾರ: ನಿಷೇಧಾಜ್ಞೆ ನಡುವೆಯೂ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

ಬಂಟ್ವಾಳ ಹಿಂಸಾಚಾರ: ನಿಷೇಧಾಜ್ಞೆ ನಡುವೆಯೂ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

      ಮಂಗಳೂರು: ಬಂಟ್ವಾಳ ಮತ್ತು ಕಲ್ಲಡ್ಕ ನಲ್ಲಿ ಕೋಮು  ಹಿಂಸಾಚಾರ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ  ನಿಷೇಧಾಜ್ಞೆ ಹೇರಿದ್ದರೂ ಆರಎಸ್ಎಸ್ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಂಟ್ವಾಳನ ಬಿ.ಸಿ.ರೋಡ್ ನಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿದರು. ಆರ್ ಎಸ್ಎಸ್ ಕಾರ್ಯಕರ್ತ ಶರತ್ ಕೊಲೆ ಯತ್ನ ವಿರೋಧಿಸಿ  ಪ್ರತಿಭಟನೆ ನಡೆದಿದ್ದು  ಕಲ್ಲಡ್ಕ ಪ್ರಭಾಕರ ಭಟ್ ನೇತೃತ್ವ ವಹಿಸಿದ್ದರು.          ನಿಷೇಧಾಜ್ಞೆ ಉಲ್ಲಂಘಿಸಲು ಪ್ರಯತ್ನಿಸಿದ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ ಕುಮಾರ ಕಟೀಲ ,  ಕಾರ್ಕಳ ಬಿಜೆಪಿ […]

ಗ್ಯಾಂಗ್ ವಾರ್: ಮೂವರಿಗೆ 10ವರ್ಷ ಜೈಲು

ಗ್ಯಾಂಗ್ ವಾರ್: ಮೂವರಿಗೆ 10ವರ್ಷ ಜೈಲು

ಶಿವಮೊಗ್ಗ : ಸಾಗರದ ನಗರದಲ್ಲಿ ನಡೆದ ಎರಡು ರೌಡಿಗ್ಯಾಂಗ್ ಗಳ ನಡುವೆ ನಡೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವ್ವರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ಒಬ್ಬನಿಗೆ 15 ಸಾವಿರ ರೂ. ಉಳಿದಿಬ್ಬರಿಗೆ ತಲಾ 10 ಸಾವಿರರೂ . ದಂಡ ವಿಧಿಸಿ ನೆನ್ನೆ ತೀರ್ಪು ನೀಡಿದೆ. ಸಾಗರದ ನೆಹರೂ ನಗರದ ನಿವಾಸಿಗಳಾದ ಅಮ್ಜಾದ್ ಅಲಿಯಾಸ್ ಅಬ್ದುಲ್ ಮುತಾಲಿಬ್ (25), ಜನ್ನತ್ ನಗರದ ಸುಫೈಲ್ ಅಲಿಯಾಸ್ ಸುಕ್ಕಾ (20) […]

ರಸ್ತೆಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ

ರಸ್ತೆಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ವಿಪಕ್ಷ ನಾಯಕ  ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡು ಪರದಾಡುತ್ತಿದ್ದ ಮೂವರನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಅವರು ತಾವೇ ಖುದ್ದಾಗಿ ತಮ್ಮ ಕಾರಿನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮಿಡಿದ ಘಟನೆ‌ನೆನ್ನೆ ಗುರುವಾರ ತಡ ರಾತ್ರಿ‌ ನಡೆದಿದೆ. ಗುರುವಾರ ರಾತ್ರಿ ಸೋಮಿನಕೊಪ್ಪ ರಸ್ತೆಯಲ್ಲಿ ಎರಡು ಬೈಕ್ ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಮೂವ್ವರು ಗಾಯಗೊಂಡು ನರಳಾಡುತ್ತಿದ್ದರು. ನಗರದ ಹೊರವಲಯದಲ್ಲಿ ಕಾರ್ಯಕ್ರಮ ವೊಂದನ್ನು ಮುಗಿಸಿಕೊಂಡು ರಾತ್ರಿ ಮನೆಗೆ ಅದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಈಶ್ವರಪ್ಪ ಅವರು ಕಾರು ನಿಲ್ಲಿಸಿ ಗಾಯಾಳುಗಳನ್ನು ತಮ್ಮದೆ ಕಾರಿನಲ್ಲಿ […]

ಕಾಂಗ್ರೆಸ್ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಇಂದು ರಾಜೀನಾಮೆ ಸಾಧ್ಯತೆ

ಕಾಂಗ್ರೆಸ್ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಇಂದು ರಾಜೀನಾಮೆ ಸಾಧ್ಯತೆ

ಅಧಿಕೃತ ಟ್ವಿಟರ್ ಖಾತೆ ಯಲ್ಲಿ ಘೋಷಣೆ ಚಿಕ್ಕಬಳ್ಳಾಪುರ:  ಹುಣಸೂರುನಲ್ಲಿ ದೇವೇಗೌಡರ ಮೊಮ್ಮಗ ಮಾತೃ ಪಕ್ಷ ಜೆಡಿಎಸ್ ವಿರುದ್ಧ ಭಿನ್ನಮತ ಸ್ಫೋಟಿಸಿದರೆ ಇತ್ತ  ಕಾಂಗ್ರೆಸ್  ಪಕ್ಷದಲ್ಲೂ  ಕಲಹ ಶುರುವಾಗಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ಹಾಗೂ ಸುಧಾಕರ್ ನಡುವೆ ಭಿನ್ನಮತದಿಂದಾಗಿ ರಾಜೀನಾಮೆ ಘೋಷಿಸುತ್ತಿದ್ದಾರೆ ಹೇಳಲಾಗುತ್ತಿದೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಕ್ಷೇತ್ರದ ಜನತೆ,ಕಾರ್ಯಕರ್ತರು, ಕಾಂಗ್ರೆಸ್ […]

ಸೂಟ್ಕೇಸ್ ತಂದವರಿಗೆ ಪಕ್ಷದಲ್ಲಿ ಆದ್ಯತೆ: ಕುಮಾರಸ್ವಾಮಿ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ

ಸೂಟ್ಕೇಸ್ ತಂದವರಿಗೆ ಪಕ್ಷದಲ್ಲಿ ಆದ್ಯತೆ: ಕುಮಾರಸ್ವಾಮಿ ವಿರುದ್ಧ ಪ್ರಜ್ವಲ್ ರೇವಣ್ಣ ಗರಂ

ಹುಣಸೂರು: ಬೂದಿ ಕೆಂಡದಂತಿದ್ದ ಜೆಡಿಎಸ್’ನಲ್ಲಿ ಬಿನ್ನಮತ ಬೀದಿಗೆ ಬಂದಿದೆ. ಸ್ವತಃ ಚಿಕ್ಕಪ್ಪನ ವಿರುದ್ಧವೇ ಮಗ ತೊಡೆ ತಟ್ಟಿದ್ದು, ತಮ್ಮ ಪಕ್ಷದ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.  ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ  ನಡೆದ ಜೆಡಿಎಸ್ ಜಾಗೃತ ಸಮಾವೇಶದಲ್ಲಿ ಮಾತೃ ಪಕ್ಷದ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದ ಎಚ್’.ಡಿ. ರೇವಣ್ಣ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ’  ನಮ್ಮ ಪಕ್ಷದಲ್ಲಿ ರೋಗವಿದ್ದು, ನಿಷ್ಠೆಯಿಂದ ಕೆಲಸ ಮಾಡುವವರನ್ನ ಹಿಂಬದಿ ಸೀಟಿನಲ್ಲಿ ಕೂರಿಸುತ್ತೇವೆ. ಸೂಟ್ ಕೇಸ್ ಕೊಟ್ಟವರನ್ನ ಮುಂದೆ ಕೂರಿಸುತ್ತೇವೆ. ಕೆಲವು ನಾಯಕರು […]