ದೇಶದ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆ ಸಾವಿತ್ರಿಬಾಯಿ ಫುಲೆ

ದೇಶದ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆ ಸಾವಿತ್ರಿಬಾಯಿ ಫುಲೆ

( ಶೋಷಿತರ ಮೊದಲ ವಿದ್ಯಾದೇವತೆˌ ಆಧುನಿಕ ಭಾರತದ ಶಿಕ್ಷಣಮಾತೆˌ ನಿಸ್ವಾರ್ಥ ಸೇವೆಯ  ಮಾದರಿಯ ವ್ಯಕ್ತಿತ್ವ ಎಂದು ಗುರುತಿಸುವ ಸಾವಿತ್ರಿಬಾಯಿ ಫುಲೆ ಅವರ  188ನೇ ಜನ್ಮದಿನವನ್ನು ದೇಶಾದ್ಯಂತ ಜನವರಿ 3ರಂದು ಆಚರಿಸಲಾಗುತ್ತಿದೆ. ಸಾವಿತ್ರಿಬಾಯಿ ಅವರ ಸಾಧನೆ ಮನವರಿಕೆಯಾದ ಮೇಲೆ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಬೇಕು ಎಂದು ಬಹುಜನರು ಒತ್ತಾಯಿಸಲಾರಂಭಿಸಿದ್ದಾರೆ. 3 ಜನವರಿ 1831ರಲ್ಲಿ ಮಹಾರಾಷ್ಟದ ಸಾತಾರ ಜಿಲ್ಲೆಯ ನಯೀಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದ್ದ ಸಾವಿತ್ರಿಬಾಯಿ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ ತಾಯಿ ಎಂದೇ ಹೆಸರಾಗಿದ್ದಾರೆ.  ದೇಶಕ್ಕೆ ಫುಲೆ […]

ಇತಿಹಾಸ ಅರಿತರೆ ಭವಿಷ್ಯ: ಶೋಷಣೆ ಮುಕ್ತ ಸಮಾಜಕ್ಕಾಗಿ ಬ್ರಿಟಿಷ್ ಕಾಲದ ಪ್ರಯತ್ನಗಳು

ಇತಿಹಾಸ ಅರಿತರೆ ಭವಿಷ್ಯ:  ಶೋಷಣೆ ಮುಕ್ತ ಸಮಾಜಕ್ಕಾಗಿ ಬ್ರಿಟಿಷ್ ಕಾಲದ ಪ್ರಯತ್ನಗಳು

  ಇತಿಹಾಸ ಅರಿಯದವರಿಗೆ ಭವಿಷ್ಯವೂ ಇಲ್ಲ ಎಂಬುದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಸಿದ್ಧ ಮಾತು. ಇತಿಹಾಸದ ಮಾತು ಬಂದಾಗ ಭಾರತವನ್ನು ಆಳಿದವರ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಭಾರತವನ್ನು ಆಳಿದವರು ದೇಶಕ್ಕೆ ನೀಡಿದ ಕೊಡುಗೆ ಏನು,  ಸ್ಥಳೀಯವಾಗಿ ಏನು ಬದಲಾವಣೆ ಆಯಿತು  ಎಂಬುದು ವಿವಾದಕ್ಕೆ ಎಳೆಸಿದ್ದೂ ಇದೆ. ಅದಾಗ್ಯೂ ಭಾರತದಲ್ಲಿ ಬ್ರಿಟಿಷರ ಆಡಳಿತ ಕಾಲದ  ಕೊಡುಗೆಗಳು ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ  ವ್ಯವಸ್ಥೆಯ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತವೆ ಅನ್ನೋದರಲ್ಲಿ ಸಂಶಯವೇ ಇಲ್ಲ.   ಭಾರತಕ್ಕೆ ಬ್ರಿಟಿಷರ  ಕೊಡುಗೆಗಳಿಂದ ಆದ ಲಾಭ […]

ಧರ್ಮಸ್ಥಳ ದೇವಸ್ಥಾನ ಶೈವ ದೇವರು, ಶೂದ್ರ ದೈವ, ಜೈನ ಆಡಳಿತದ ಸಮ್ಮಿಳನ !

ಧರ್ಮಸ್ಥಳ ದೇವಸ್ಥಾನ ಶೈವ ದೇವರು, ಶೂದ್ರ ದೈವ, ಜೈನ ಆಡಳಿತದ ಸಮ್ಮಿಳನ !

ಸಿದ್ದರಾಮಯ್ಯ ಅವರು  ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದ ಪ್ರಕರಣ ವಾದ ಪ್ರತಿವಾದಗಳಿಗೆ ಆಸ್ಪದ ಒದಗಿಸಿತ್ತು.  ಧರ್ಮಸ್ಥಳ ದೇವಸ್ಥಾನ ಆಡಳಿತ ಮಂಡಳಿಯವರು ಸ್ಪಷ್ಟೀಕರಣವನ್ನೂ ನೀಡಬೇಕಾಗಿ ಬಂತು.  ‘ಮೀನು ಮಾಂಸ ತಿಂದು ದೇವಸ್ಥಾನ ಪ್ರವೇಶಿಸಬಾರದು ಎಂಬ ನಿಯಮ ಇಲ್ಲ’ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ನೀಡಿದ ಸ್ಪಷ್ಟೀಕರಣ ಸಕಾರಣವಾಗಿಯೇ ಇತ್ತು.  ಧರ್ಮಸ್ಥಳದ ದೇವಸ್ಥಾನ  ಮೂಲದಲ್ಲಿ ಹಲವು ದೈವಗಳನ್ನುಳ್ಳ ಒಂದು ದೈವದ ಮನೆಯಾಗಿತ್ತು. ಅಣ್ಣಪ್ಪ ಪಂಜುರ್ಲಿ ಮೂಲ ದೈವ ಅಥವಾ ರಾಜದೈವವಾಗಿತ್ತು. ಪಂಜುರ್ಲಿ ತುಳು ಬಿಲ್ಲವರ ಕುಲದೈವ. ತುಳುವಿನಲ್ಲಿ ಇದು […]

ನಮ್ಮ ಮೂತ್ರದ ವಿಶೇಷ ತಿಳಿಯಿರಿ, ಅದು ಆರೋಗ್ಯದ ಕನ್ನಡಿ!

ನಮ್ಮ ಮೂತ್ರದ ವಿಶೇಷ ತಿಳಿಯಿರಿ, ಅದು ಆರೋಗ್ಯದ ಕನ್ನಡಿ!

ಮೂತ್ರ  ಕಟ್ಟಿಕೊಂಡಾಗಲೇ ಅದರ ಮಹತ್ವ ಗೊತ್ತಾಗುತ್ತದೆ. ಗಂಡು ಹುಡುಗರಾದರೆ ತುರ್ತಾಗಿ  ಎಲ್ಲೆಂದರಲ್ಲೇ  ನಿಸರ್ಗದ  ಕರೆಗೆ ಓಗೊಡುತ್ತಾರೆ.  ಹೆಣ್ಣು ಮಕ್ಕಳಿಗೆ ಸುರಕ್ಷತೆಯ  ಕಡೆಗೂ ಗಮನ ನೀಡಬೇಕಾದ  ಅನಿವಾರ್ಯತೆ  ಇರುತ್ತದೆ. ಮೂತ್ರ ಸರಿಯಾಗಿ ಮಾಡಿದರೆ ಮಾತ್ರ  ಆ ಮನುಷ್ಯ ಆರೋಗ್ಯವಂತ ಅನ್ನಬಹುದು. ಈ  ಮೂತ್ರದ ವಿಶೇಷತೆ  ಏನು ಎಂಬ ಬಗ್ಗೆ ಕುತೂಹಲ ತಣಿಸಲು ಒಂದಿಷ್ಟು ಮಾಹಿತಿ ಹೊತ್ತು ತಂದಿದ್ದೇವೆ. 1) ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ ಏಳು ಬಾರಿ ಮೂತ್ರ ಮಾಡುತ್ತಾನೆ/ಳೆ. ಅದಕ್ಕಿಂತ ಕಡಿಮೆಯಾದರೆ ಆತನ/ಅವಳ ಆರೋಗ್ಯದಲ್ಲಿ ತೊಂದರೆ ಇದೆ […]

ಟಿಪ್ಪು ವಿರೋಧಿಗಳು ಯಾರು…? ಯಾಕೆ…..?

(ಈ ವರ್ಷ  ಟಿಪ್ಪು ಸುಲ್ತಾನ್ ಹೆಚ್ಚು ಚರ್ಚೆಯಲ್ಲಿದ್ದಾರೆ. ಎಡಪಂಥೀಯರು, ರಾಷ್ಟ್ರವಾದಿಗಳು ಟಿಪ್ಪುವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಬಲಪಂಥೀಯರು  ಮತ್ತು  ‘ಹಿಂದೂ’ ರಾಷ್ಟ್ರದ ಕನಸುಗಾರರು ಟಿಪ್ಪುವನ್ನು  ತೆಗಳಲು ಹೆಚ್ಚು ಸಮಯ ಖರ್ಚು ಮಾಡಿದ್ದಾರೆ. ಆದರೆ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪುವಿನ ವೀರಗಾಥೆ, ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಕೆದಕಿ ಚರ್ಚೆಯ ಅಲೆಗಳಿಗೆ ದಾರಿ ಮಾಡಿದ್ದಾರೆ. ಟಿಪ್ಪು ನಡೆಸಿದ ಯುದ್ಧಗಳ ಪರ, ವಿರೋಧದ ಚರ್ಚೆ ಜಾರಿಯಲ್ಲಿದೆ. ಹಲವರು ಮಾಧ್ಯಮಗಳನ್ನು ಬಳಸಿಕೊಂಡು ಪೇಪರ್ ಟೈಗರ್ ಗಳಂತೆ ಕಾದಾಡಿದ್ದಾರೆ. ಇಂಥದರಲ್ಲಿ […]

ಸಾಮಾನ್ಯ ಜನರಿಂದ ದೂರ ಸರಿಯುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿ

ಸಾಮಾನ್ಯ ಜನರಿಂದ ದೂರ ಸರಿಯುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ಕುರಿತು ದೇಶಾದ್ಯಂತ ಚರ್ಚೆಯ ಅಲೆಗಳೆದ್ದಿವೆ.   ದೇಶದ ಆರ್ಥಿಕ ಸುಧಾರಣೆಗಳು ಸಾಮಾನ್ಯ ಜನರಿಗಾಗಿ ಸರಳ, ಪರಿಣಾಮಕಾರಿ ರೀತಿಯಲ್ಲಿ ಇಲ್ಲ,  ಅತ್ಯಂತ ಆಕ್ರಮಣಕಾರಿ ಸುಧಾರಣೆಗಳನ್ನು – ಬದಲಾವಣೆಗಳನ್ನು ತಡೆದುಕೊಳ್ಳುವಷ್ಟು ಶಕ್ತಿ ದೇಶಕ್ಕೆ ಇಲ್ಲ ಎಂಬ ಸರಳ ಅಂಶವನ್ನು ಮರೆತಿರುವುದು ಎಲ್ಲ ರೀತಿಯ ಟೀಕೆಗಳು, ಚರ್ಚೆಗಳಿಗೆ ಕಾರಣವಾಗಿದೆ. ಮಾಜಿ ಹಣಕಾಸು ಸಚಿವ, ರಿಜರ್ವ ಬ್ಯಾಂಕ್ ಮಾಜಿ ಗವರ್ನರ್ ಸಹಿತ ಹಲವು ತಜ್ಞರು ತಮ್ಮ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಕೇಂದ್ರದ ಹಣಕಾಸು […]

ಜಿಎಸ್‍ಟಿ ಅಥವಾ ಸರಕು ಸೇವೆ ತೆರಿಗೆ : ಕೆಲವು ಟಿಪ್ಪಣಿಗಳು

ಜಿಎಸ್‍ಟಿ ಅಥವಾ ಸರಕು ಸೇವೆ ತೆರಿಗೆ : ಕೆಲವು ಟಿಪ್ಪಣಿಗಳು

ಸರಕುಸೇವೆ ಅಥವಾ ಜಿಎಸ್‍ಟಿ ಜಾರಿಗೆ ಬಂದು ದೇಶದಲ್ಲಿ ಚರ್ಚೆಯ ಅಲೆಗಳು ಎದ್ದಿವೆ. ತೆರಿಗೆ ಜಾರಿಗೊಂಡು ಎರಡು ತಿಂಗಳು ಕಳೆಯುತ್ತ ಬಂದರೂ ಗೊಂದಲುಗಳು ಬಗೆಹರಿದಿಲ್ಲ. ಕರ್ನಾಟಕದ ಪ್ರಮುಖ ಅರ್ಥಚಿಂತಕ  ಎಂ.ಚಂದ್ರ ಪೂಜಾರಿ ಈ ಜಿಎಸ್ ಟಿ ಕುರಿತು   ನಮ್ಮ ನಿಮ್ಮೆಲ್ಲರಿಗೂ  ಬಹಳ ಮುಖ್ಯವಾದ ಅಂಶಗಳನ್ನು ಅತ್ಯಂತ ಸರಳವಾಗಿ, ಆಕರ್ಷಕವಾಗಿ ತಿಳಿಸಿಕೊಟ್ಟಿದ್ದಾರೆ. ಈ ಬರೆಹವನ್ನು  ಬಿಡದೆ ಕೊನೆಯವರೆಗೂ ಓದಿದರೆ ಒಂದಿಷ್ಟು ಮಹತ್ವದ ಮಾಹಿತಿಗಳು ಸರಳವಾಗಿ ತಿಳಿಯುತ್ತವೆ.) ———————————————————————————————————————————— ಜುಲೈ ಒಂದರಿಂದ ದೇಶವ್ಯಾಪಿ ಸರಕುಸೇವೆ ಅಥವಾ ಜಿಎಸ್‍ಟಿ ಜಾರಿಗೆ ಬಂದಿದೆ. ಪೇಪರ್‍ಗಳಲ್ಲಿ, […]

ಯುದ್ಧ ದಾಹ: ನೆಲಕಚ್ಚಿ ನಿಂತ ಸೈನಿಕರೇ, ನಿಮಗಿದೋ ಕೋಟಿ ಸಲಾಂ…!

ಯುದ್ಧ ದಾಹ: ನೆಲಕಚ್ಚಿ ನಿಂತ ಸೈನಿಕರೇ, ನಿಮಗಿದೋ ಕೋಟಿ ಸಲಾಂ…!

ನಮ್ಮ ದೇಶದೊಳಗೆ ಕೆಲವು ಮನಃಸ್ಥಿತಿಗಳಿವೆ. ಅವರ ಚಿಂತನೆಗಳಿಗೆ ತಲೆಬುಡವೇ ಇರುವುದಿಲ್ಲ. ಆಕ್ರೋಶಕ್ಕೆ ಅರ್ಥವೂ ಇರುವುದಿಲ್ಲ. ಮೆದುಳು ಶಕ್ತಿಗೆ ಅನುಗುಣವಾಗಿ ಅವರ ನಾಲಿಗೆ ಹರಿತವಾಗುತ್ತದೆ. ಆದರೆ ತೋಳ್ಬಲದ ಬಗ್ಗೆ ಕಿಂಚಿತ್ತು ಪರಾಮರ್ಶೆ ಇರುವುದಿಲ್ಲ. ಕಾಶ್ಮೀರದ ಗಡಿಯಲ್ಲಿ ನಿಂತು ಭಾರತದವರು ಉಚ್ಛೆ ಹುಯ್ದರೆ ಪಾಕಿಸ್ತಾನ ಮುಳುಗಡೆಯಾಗುತ್ತದೆ ಎಂಬ ಚಪ್ಪಾಳೆಯ ಹೇಳಿಕೆಗಳನ್ನು ಕೊಡುವವರಿಗೆ ಪ್ರಸ್ತುತ ಪರಮಾಣುವಿನ ಆಘಾತಕಾರಿ ಅಂಶಗಳ ಬಗ್ಗೆ ಅರಿವಿಲ್ಲ. ಐವತ್ತಾರು ಇಂಚಿನ ಎದೆ ಇಟ್ಟುಕೊಂಡು ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗುವ ಬದಲು ವಿಶ್ವದ ಮುಂದೆ ದೂರು ದಾಖಲಿಸುತ್ತಿದ್ದಾರೆ ಎಂದರೆ  […]

ದುರಾಚಾರಿ ಗುರುವಲ್ಲ, ಗುರುವಿನ ಗುಲಾಮ ಅನ್ನೋದು ಶೋಷಣೆ

ದುರಾಚಾರಿ ಗುರುವಲ್ಲ,  ಗುರುವಿನ ಗುಲಾಮ ಅನ್ನೋದು ಶೋಷಣೆ

ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಇಂದಿಗೂ ಹೇಳಲಾಗುತ್ತದೆ.  ಬಸವಾದಿ ಶರಣರ ಕಾಲಕ್ಕಿಂತ ಮೊದಲು ಈ ಮಾತಿಗೆ ಎದುರು ಆಡುವವರು ಇರಲಿಲ್ಲ. ವ್ಯಕ್ತಿ ಗುಲಾಮನಾಗಿರಬೇಕಾದ ವ್ಯವಸ್ಥೆಯನ್ನು ಪ್ರಶ್ನಿಸುವವರು ಇರಲಿಲ್ಲ.  ಶಿಷ್ಯನೆಂದರೆ ಆತ ಖಾಯಂ ಶಿಷ್ಯ ಮಾತ್ರ. ಆ ಗುರುವನ್ನು ಮೀರಿ ಬೆಳೆಯುವುದು ಸಾಧ್ಯವಿಲ್ಲ ಎಂಬ ನಂಬುಗೆಗಗಳು ಪ್ರಬಲವಾಗಿದ್ದವು. ನದಿ ಮೂಲ ಮತ್ತು ಋಷಿ ಮೂಲ ನೋಡಬಾರದು ಎಂಬ ನಾಣ್ಣುಡಿಯ ಮೂಲಕ ಅವರ ಇತಿಹಾಸ ಕೆದಕಬಾರದು ಎಂದು ಸಾರಿಕೊಂಡು ಬಂದಿತ್ತು ಒಂದು ವರ್ಗ. ಇಂಥ ವಿಪರೀತ ಗೌರವಾರ್ಹ ಘನತೆ […]

ಉನಾ ಕ್ರೌರ್ಯಕಾಂಡಕ್ಕೆ ಜು.11ರಂದು ಒಂದು ವರ್ಷ: “ಸ್ವಾತಂತ್ರ್ಯ ನಡಿಗೆ”ಗೆ ಜತೆಯಾಗಿ

ಉನಾ ಕ್ರೌರ್ಯಕಾಂಡಕ್ಕೆ ಜು.11ರಂದು ಒಂದು ವರ್ಷ: “ಸ್ವಾತಂತ್ರ್ಯ ನಡಿಗೆ”ಗೆ  ಜತೆಯಾಗಿ

“ನಿಮ್ಮ ದನದ ಬಾಲ ನೀವೇ ಇಟ್ಕೊಳ್ಳಿ, ನಮಗೆ ನಮ್ಮ ಭೂಮಿ ಕೊಡಿ!” ಗುಜರಾತಿನ ಚಾರಿತ್ರಿಕ ಉನಾ ಹೋರಾಟದ ಮೊದಲ ವಾರ್ಷಿಕ ದಿನ (ಜು.11) ಬಂದಿದೆ. ಅಲ್ಲಿಂದೀಚೆಗಿನ ಒಂದು ವರ್ಷದ ಅವಧಿಯಲ್ಲಿ ‘ಗೋ ರಕ್ಷಕ’ ಗೂಂಡಾಗಳು ಗೋ ರಕ್ಷಣೆಯ ಹೆಸರಿನಲ್ಲಿ ದಲಿತರ ಮೇಲೆ ಎಸಗಿರುವ ಹಿಂಸೆಯ ಪ್ರಕರಣಗಳು ಅನೇಕ ಪಟ್ಟು ಹೆಚ್ಚಳವಾಗಿವೆ;. ಅದೇ ವೇಳೆ ಈ ಕ್ರೌರ್ಯ ಎಸಗಿದವರು ಯಾವ ಶಿಕ್ಷೆಯಾಗಲಿ ಅದರ ಅಂಜಿಕೆಯಾಗಲಿ ಇಲ್ಲದೆ ಆರಾಮಾಗಿ ಅಂಡಲೆದುಕೊಂಡಿದ್ದಾರೆ. ಹಾಗಾಗಿ ಮೋದಿ ಸರ್ಕಾರದ ಮೂರು ವರ್ಷಗಳ ಆಡಳಿತದ ಸರಿ-ತಪ್ಪುಗಳನ್ನು […]