ಗೋವಿನ ಕಥೆ

ಗೋವಿನ ಕಥೆ

  ತುಮಕೂರಿನ ಹಾದಿ ಹಿಡಿದಿದ್ದ ನನಗೆ ತಿಪಟೂರಿನ ಅಯ್ಯನ್ ಬಾವಿ ಗ್ರಾಮದ ಬಳಿ ಹಿಂಡು ಹಿಂಡಾಗಿ‌ ದನ- ಕರುಗಳು ಕೊಪ್ಪಲು ಹಾಕಿರುವುದು ಕಣ್ಣಿಗೆ ಬಿತ್ತು. ಇದೇನು ? !! ನೆನ್ನೆಯಷ್ಟೇ ಗೋಹತ್ಯೆ ನಿಷೇಧ ಕಾಯ್ದೆ ಘೋಷಣೆಯಾಗಿದೆ. ಅಷ್ಟರಲ್ಲಾಗಲೇ ಇಷ್ಟೋ ರಾಸುಗಳನ್ನು ರಕ್ಷಿಸಿ ಬಿಟ್ಟಿತಾ ನಮ್ಮ ಬ್ಯೂರಾಕ್ರಾಟ್ ಎಂದು ಆಶ್ಚರ್ಯದಿಂದ ಕಾರಿನಿಂದಿಳಿದು ಕೊಪ್ಪಲುಗಳ ಹತ್ತಿರ ಹೋದೆ. ಬರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗೋ ಶಾಲೆ ತೆರೆದು ಮೇವು ಉಣಿಸುತ್ತಿರುವುದು ತಿಳಿಯಿತು. ಕಳೆದ ಆರು ತಿಂಗಳಿಂದ ಸುತ್ತ-ಮುತ್ತಲಿನ ವಕ್ಕಲು ಮಕ್ಕಳು […]