ಮಗುವಿನಂತಹ ಮನಸ್ಸು ನಿಮ್ಮದಿರಲಿ

ಮಗುವಿನಂತಹ ಮನಸ್ಸು ನಿಮ್ಮದಿರಲಿ

ಪ್ರತಿಯೊಬ್ಬ ಮನುಷ್ಯನಲ್ಲಿ ಮಗುವಿನ ಮನಸ್ಸು, ವರ್ತನೆ ಇದ್ದೇ ಇರುತ್ತದೆ,ಆ ಮುಗ್ದ ಮನಸ್ಸನ್ನು ಯಾವ ಮನುಷ್ಯ ಕಾಯ್ದುಕೊಂಡು ಹೋಗುತ್ತ ಇರ್ತಾನೋ, ಅವನಿಗೆ ಇಲ್ಲ ಸಲ್ಲದ ರೋಗಗಳು ಅಂಟಿಕೊಳ್ಳೋದಿಲ್ಲ. ಮುಪ್ಪು ಅನ್ನೋದು ಬೇಗ ಬರಲ್ಲ..ಕೆಲವು ಜನ ವಯಸ್ಸಿಗೆ ತಕ್ಕ ಹಾಗೆ ತಮ್ಮ ಮನಸ್ಸನ್ನು ತಾವೇ ಬದಲಾಯಿಸಿಕೊಂಡು ಬಿಡ್ತಾರೆ…ನಾನಿನ್ನು ರಿಟೈರ್ಡ್ಆದೇ,ಇನ್ನು ನನಗೆ ಬಿ.ಪಿ,,ಶುಗರ್ ಬರತ್ತೆ…ಇನ್ನು ನ ಆದಷ್ಟು ರೆಸ್ಟ್ ಮಾಡ್ಬೇಕು,ಮನೆಯ ಹಿರಿಯ ನಾನು,ಹೆಚ್ಚು ನಗಬಾರ್ದು,ಹೆಚ್ಚು .ಮಾತಾಡ್ಬಾರ್ದು,ಗಂಭೀರ ಇರ್ಬೇಕು. ನನಗೇ ಬಹಳ ಚಿಂತೆ ಜವಾಬ್ದಾರಿಗಳಿವೆ,ಹೀಗೆಲ್ಲ ಅನ್ನುತ್ತಾ ತಮ್ಮ ಒಳಗಿರುವ ಮಗುವನ್ನು ತಾವೇ ಕೈಯಾರೆ […]

ಕಾಯಕ, ನಿಯತ್ತು ಮತ್ತು ನಾವು…!

ಕಾಯಕ, ನಿಯತ್ತು ಮತ್ತು ನಾವು…!

ಯಾವುದೇ ಒಂದು ವ್ಯವಸ್ಥೆ ಅಥವಾ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ,ಅಲ್ಲಿನ ಕೆಲಸಗಾರರ ನಿಯತ್ತಿನ ದುಡಿಮೆಯೇ ಕಾರಣ. ನಮ್ಮ ಭಾರತದಲ್ಲಿ ಇಷ್ಟೆಲ್ಲ ಅಭಿವೃದ್ದಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಇದ್ರೂ, ಇಷ್ಟೊಂದು ಕೋಟಿಗಟ್ಟಲೆ ದುಡ್ಡು ಸುರಿತಾ ಇದ್ರೂ ಕೂಡ ಭಾರತ ಇನ್ನೂ ಅಭಿವೃದ್ಧಿ ಶೀಲ ರಾಷ್ಟ್ರವಾಗಿಯೇ ಹೆಣಗಾಡುತ್ತಾ ಸಾಗುತ್ತಿದೆ. ಕಾರಣ ಏನು ಗೊತ್ತಾ ? ಸಾಕಷ್ಟು ಕಲಿತು ,ದೊಡ್ಡ ದೊಡ್ಡ ಡಿಗ್ರಿ ಬೋರ್ಡಿಗೆ ಹಂಚಿಕೊಂಡು ಕೆಲಸ ಗಿಟ್ಟಿಸಿಕೊಳ್ಳೋ ನೌಕರರು ಈ ದಿನ ನಿಯತ್ತುಅನ್ನೋ ಪದ ಮರೆತು ಕುಳಿತಿರೋದೇ ಇದಕ್ಕೆ ಮೂಲ.  ಇದು ನನ್ನ […]

ನಾವು ಮತ್ತು ಸಾವು

ನಾವು ಮತ್ತು ಸಾವು

ಸಾವಿಗೆ ಪ್ರತಿಯೊಬ್ಬ ಮನುಷ್ಯ ಹೆದರುವುದು ಸಹಜ. ಹಾಗಾದ್ರೆ ಈ ಹೆದರಿಕೆ ಯಾಕೆ ಇರುತ್ತದೆ? ಬಹುಶಃ ಈ ಜಗತ್ತಿನ ಮೇಲಿನ, ಸುಖ ಸಂತೋಷ ನನ್ನ ಪಾಲಿಗೆ ಮುಗಿದು ಹೋಗುತ್ತದೆ. ಸತ್ತ ನಂತರದ ಜೀವನಹೇಗಿರುತ್ತದೆ?ನಂತರವೂ ನನಗೆ ಒಂದು ಜೀವನ ಇರುತ್ತದಾ? ನನ್ನ ದೇಹವನ್ನು ನಾ ಸತ್ತ ಮೇಲೆ ಸುಡುತ್ತಾರೆ ಅಥವಾ ಮಣ್ಣಲ್ಲಿ ಹೂಳುತ್ತಾರೆ.ಹಾಗಾದ್ರೆ ದೇಹವಿಲ್ಲದೆ ನಾ ಇರೋದಾದ್ರು ಹೇಗೆ?ಇವೆ ನೂರಾರು ವಿಚಾರಗಳು ನಮ್ಮನ್ನು ಸಾವಿಗೆ ಅಷ್ಟೊಂದು ಹೆದರುವ ಹಾಗೆ ಮಾಡುತ್ತವೆ . ಹೇಳುವ ತಾತ್ಪರ್ಯ ಇಷ್ಟೇ ಸ್ನೇಹಿತರೇ, ಸಾವಿಗೆ ಹೆದರುವ […]

ನಾವು ಮತ್ತು ಸಂಬಂಧಗಳು

ನಾವು ಮತ್ತು ಸಂಬಂಧಗಳು

ಒಬ್ಬ ವ್ಯಕ್ತಿಯ ಜೊತೆಗೆ ನಿಜವಾಗಿ ಎಷ್ಟು ಆಳವಾದ ಪ್ರೀತಿ,ಸ್ನೇಹ ನಾವು ಹೊಂದಿದ್ದೇವೆ ಅನ್ನೋದು ಅರ್ಥ ಆಗೋದು ಆ ವ್ಯಕ್ತಿ ಇನ್ನು ಮರಳಿ ಬಾರದ ಲೋಕಕ್ಕೆ  ಬಿಟ್ಟು ಆಗಲಿ ಹೋದಾಗಲೆ. ಇನ್ನೂ ಮೃತನ ಶರೀರವನ್ನು ಮನೆಯಿಂದ ಹೊರಗೆ ಸ್ಮಶಾನಕ್ಕೆ ಒಯ್ದಿರೋದಿಲ್ಲ, ಅವಾಗಲೇ ನಮಗೆ ಆ ವ್ಯಕ್ತಿಯ ಒಳ್ಳೆಯ ಗುಣಗಳು,ವರ್ತನೆಗಳು ನೆನಪಾಗತೊಡಗುತ್ತವೆ. ಅದೇ ತರಹ ಆ ವ್ಯಕ್ತಿಯ ಜೊತೆಗೆ ನಾನು ಇನ್ನೂ ಪ್ರೀತಿಯಿಂದ ಇರಬಹದಿತ್ತಲ್ವಾ? ಅವರ ಇಷ್ಟಗಳನ್ನು ನಾನು ಪೂರೈಸಬಹುದಿತ್ತಲ್ವಾ?ಆ ಜೀವಕ್ಕೆ ನಾನು ಅದೆಷ್ಟು ಕಷ್ಟ ಕೊಟ್ಟೆ ಅಂತ ನಮಗೆ […]

ಮಕ್ಕಳ ಶುಭ್ರ ಮನದಲ್ಲಿ ಯಾರ್ಯಾರೋ ಗೂಡು ಕಟ್ಟಲು ಹವನಿಸುತ್ತಿದ್ದಾರೆ: ಪಾಲಕರಲ್ಲಿ ಆತ್ಮಾವಲೋಕನದ ಅಗತ್ಯವಿದೆ

ಮಕ್ಕಳ ಶುಭ್ರ ಮನದಲ್ಲಿ ಯಾರ್ಯಾರೋ ಗೂಡು ಕಟ್ಟಲು ಹವನಿಸುತ್ತಿದ್ದಾರೆ: ಪಾಲಕರಲ್ಲಿ ಆತ್ಮಾವಲೋಕನದ ಅಗತ್ಯವಿದೆ

ಮಕ್ಕಳ ದಿನಾಚರಣೆ ವಿಶೇಷ… “ಮಕ್ಕಳು ದೇವರ ಸಮಾನ. ಮಕ್ಕಳು ಅಂದರೆ ಬೆರಗು, ಮಕ್ಕಳ ಮನಸ್ಸು ಬಿಳಿ ಹಾಳೆ ಎಂಬಿತ್ಯಾದಿ ಮಾತುಗಳು ಮಕ್ಕಳ ಮುಗ್ಧತೆ, ಮಕ್ಕಳ ಕುತೂಹಲ, ಮಕ್ಕಳ ನಿರ್ಮಲವಾದ ಮನಸ್ಸಿಗೆ ಸಾಕ್ಷಿಯಾಗಿವೆ”. “ಹಾಲಬೇಡಿ ಅತ್ತಾನ ಕೋಲಬೇಡಿ ಕುಣದಾನ.. ಮೊಸರಬೇಡಿ ಕೆಸರ ತುಳಾದನ” ಎನ್ನವ ಜಾನಪದ ತ್ರಿಪದಿ ಮಗುವಿನ ತುಂಟಾಟ ಕುರಿತು ಹೇಳುತ್ತದೆ. ಅಂತೆಯೇ ಜನಪದರು ಮಕ್ಕಳಿರಲವ್ವ ಮನೆ ತುಂಬ ಎಂದು ಹೇಳಿದ್ದಾರೆ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎನ್ನುವಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ […]

ಹೆಣ್ಣುಮಕ್ಕಳಿಗೆ ಏಕೆ ಈ ತಾರತಮ್ಯ ?

ಹೆಣ್ಣುಮಕ್ಕಳಿಗೆ ಏಕೆ ಈ ತಾರತಮ್ಯ ?

ಗಂಡ ಸತ್ತು ಹೋದ ಮೇಲೆ ನಮ್ಮ ಸಮಾಜ ಆ ಹೆಣ್ಣನ್ನು ಪ್ರತಿಕ್ಷಣ ಕೊಲ್ಲುತ್ತಾ ಇರುತ್ತದೆ. ಸತ್ತು ಹೋದವರೇನೋ ಚಿರನಿದ್ರೆ ಯಲ್ಲಿ ಇದ್ದುಬಿಡ್ತಾರೆ. ಆದರೆ ಹೆಣ್ಣು ಕಣ್ತುಂಬ ನಿದ್ದೇನೂ ಮಾಡದ ಹಾಗೆ ಸಮಾಜ ಅವಳಿಗೆ ಮಾನಸಿಕ ವೇದನೆ ನೀಡುತ್ತದೆ. ಅದಕ್ಕೆ ಕಾಣಿಸುತ್ತೆ ,ಹಿಂದಿನ ಕಾಲದಲ್ಲಿ ಹೆಣ್ಣನ್ನು ಕೂಡ ಆಕೆಯ ಗಂಡನ ಚಿತೆಗೆ  ಜೀವಂತ ಹಾಕಿ ಸುಟ್ಟು ಬಿಡ್ತಾ ಇದ್ರು. ಸ್ನೇಹಿತರೇ, ಹೆಣ್ಣು ಕೂಡ ಗಂಡಿನ ತರಾನೇ, ಮಾಂಸ,ರಕ್ತ, ಎಲಬು ಇರೋ ಶರೀರ ಹೊಂದಿರುತ್ತಾಳೆ.  ಅವಳಿಗೂ ಗಂಡಿನ ತರವೇ ಆಸೆ,ಆಕಾಂಕ್ಷೆಗಳಿರುತ್ತವೆ. […]

ಪ್ರೀತಿ, ತ್ಯಾಗವೇ ಸುಂದರ ಬದುಕಿನ ತಿರುಳು

ಪ್ರೀತಿ, ತ್ಯಾಗವೇ ಸುಂದರ ಬದುಕಿನ ತಿರುಳು

ಮದುವೆ ಅನ್ನೋ ಸಂಬಂಧ ದಿನ ಕಳೆದ ಹಾಗೆ ತನ್ನ ಖುಷಿಯನ್ನು ಕಳೆದುಕೊಂಡು ,ನೀರಸವಾಗಿಬಿಡತ್ತೆ, ಮಕ್ಕಳುಮರಿ ಅನ್ನೋ ಹೊಸ ಸಂಬಂಧಗಳ ಸೇರ್ಪಡೆಯಿಂದ ,ಮತ್ತಷ್ಟು ಕಗ್ಗಂಟಾಗಿ ಬಿಡತ್ತೆ.ಎಷ್ಟೋ ಸಾರಿ ಯಾಕಾದ್ರು ಮದುವೆ ಆದೇ ಅನ್ನೋ ಮಟ್ಟಕ್ಕೆ ಆ ಸಂಬಂಧ ರುಚಿ ಕಳೆದುಕೊಂಡು ಬಿಡತ್ತೆ…..ಯಾಕೆ ಹೀಗೆ?????? ಸ್ನೇಹಿತರೇ ಮದುವೆ ಅನ್ನೋ ಸಂಬಂಧ ಪೆಟ್ರೋಲ್ ಗಾಡಿ ತರ.ಪೆಟ್ರೋಲ ಅನ್ನೋ ಪ್ರೀತಿ ತುಂಬಿದಾಗಲೇ ಒಡತ್ತೆ. ಕಡಿಮೆ ಆದಗ ರಿಸರ್ವ್ ಬಿದ್ದ್ಬಿಡತ್ತೆ.ಖಾಲಿ ಆದರಂತೂ ನಿಂತೆಬಿಡತ್ತೆ…..ಹೊಸ ಗಾಡಿ ಇದ್ದಾಗ ಅದರ ಕಾಳಜಿ ಬಹಳ,ಅದರ ಮೇಲಿನ ಪ್ರೀತಿ ಬಹಳ,ಸ್ವಲ್ಪ […]

ಆತ್ಮಸಾಕ್ಷಿಯ ಮಾತು ಕೇಳೋಣ

ಯಾವುದು ತಪ್ಪು,ಯಾವುದು ಹಾನಿಕಾರಕ ಅನ್ನುವದು ಗೊತ್ತಿದ್ದರೂ ಕೂಡ ,ಅದನ್ನೇ ಮಾಡುತ್ತಾ ಇದ್ದರೆ,ಪ್ರಾರಂಭದಲ್ಲಿ ನಮ್ಮ್ ಆತ್ಮಸಾಕ್ಷಿ ನಮ್ಮನ್ನ ಎಚ್ಚರಿಸುತ್ತಾ ಇರುತ್ತದೆ,,ಆದರೆ ಅದು ಅಷ್ಟೊಂದು ಎಚ್ಚರಿಸಿದಾಗಲೂ, ನಾವು ಅದರ ಮಾತು ಕೇಳದೇ ಹೋದರೆ,ಅಥವಾ ನಮ್ಮ ನಡವಳಿಕೆ ಬಡಲಾಯಿಸದೇ ಹೋದರೆ,…..ಸ್ವಲ್ಪ ದಿನದ ನಂತರ ಆ ಆತ್ಮಸಾಕ್ಷಿ ಮೌನವಾಗಿ ಬಿಡುತ್ತದೆ….ಯಾವಾಗ ಅಂತರಂಗದ ದ್ವನಿ ಸ್ತಬ್ಧವಾಗಿಬಿಡುತ್ತದೋ ಆವಾಗ ಮನುಷ್ಯನ ಅಧೋಗತಿ ಅತಿ ವೇಗವಾಗಿ ಸಾಗಲು ಪ್ರಾರಂಭವಾಗುತ್ತದೆ………ನಂತರ ಆದೇ ಆತನ ಸ್ವಭಾವ,ವರ್ತನೆಯಾಗಿ ಪರಿವರ್ತಿತವಾಗಿಬಿಡತ್ತೆ…..ನಮ್ಮ್ ಹಳ್ಳವನ್ನು ನಾವೇ ತೋಡಿಕೊಳ್ಳೋದು,,,ಗಾದೆ ಮಾತು ಕೇಳಿದಿರಾ ತಾನೇ? -ರೆಜೀನಾ ಕೆ, ಶಿಕ್ಷಕಿ […]

ಮಹಾತ್ಮಾ ಗಾಂಧೀಜಿ ಕಲಬುರಗಿಗೂ ಬಂದಿದ್ರು!

ಮಹಾತ್ಮಾ ಗಾಂಧೀಜಿ ಕಲಬುರಗಿಗೂ ಬಂದಿದ್ರು!

ಹೈದರಾಬಾದ್ ನಿಜಾಂ ಆಳರಸರ ಆಳ್ವಿಕೆಗೆ ಒಳಪಟ್ಟಿದ್ದ ಕಲಬುರಗಿ ನಗರಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದರು….! ಸ್ವಾತಂತ್ರ್ಯ ಸಂಗ್ರಾಮವನ್ನು ಬೆಂಬಲಿಸಿದ್ದ ಕಲಬುರಗಿಯ ಶರಣ ಬಸವೇಶ್ವರ ಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಬಗ್ಗೆ ಕೆಲವು ಮುಸ್ಲಿಂ ಕೋಮುವಾದಿಗಳು ತಪ್ಪು ತಿಳಿದುಕೊಂಡಿದ್ದರು. ದೊಡ್ಡಪ್ಪ ಅಪ್ಪ ಅವರು ಕೈಗೊಂಡಿದ್ದ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ನಿಜಾಂ ಸರ್ಕಾರ ಶರಣಬಸವೇಶ್ವರ ದೇವಸ್ಥಾನದ ಮೇಲೆ ದಾಳಿ ನಡೆಸಿತ್ತು. ನೆರೆಯ ಬೀದರ್‍ನಲ್ಲಿ ಕೂಡ ಗಲಾಟೆ ಆಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದ್ದವು. […]

ಹೈದರಾಬಾದ್ ಕರ್ನಾಟಕ ಹೋರಾಟಗಾರ ಅಚ್ಚಪ್ಪಗೌಡ ಸುಬೇದಾರ ಬಗ್ಗೆ ನಿಮಗೆಷ್ಟು ಗೋತ್ತು?

ಹೈದರಾಬಾದ್ ಕರ್ನಾಟಕ ಹೋರಾಟಗಾರ ಅಚ್ಚಪ್ಪಗೌಡ ಸುಬೇದಾರ ಬಗ್ಗೆ ನಿಮಗೆಷ್ಟು ಗೋತ್ತು?

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚಾರಣೆ ನಿಮಿತ್ತ ಈ ಲೇಖನ…. “ಅಂದು 1947 ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿತ್ತು ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕ ಯಾತನೆಯನ್ನು ಅನುಭವಿಸುತ್ತಿತ್ತು. ಈ ಪ್ರದೇಶ ಅಂದರೆ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಈ ಪ್ರದೇಶಗಳು ನಿಜಾಮನ ಆಳ್ವಿಕೆಯಲ್ಲಿದ್ದವು. ಅಂದು ಆತನ ಸಾಮ್ರಾಜ್ಯವು ಭಾರತದೊಂದಿಗೆ ವಿಲೀನಗೊಳಿಸಲು ನಿರಾಕರಿಸಿದ್ದಕ್ಕಾಗಿ ಅಂದಿನ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲರ ನೇತೃತ್ವದಲ್ಲಿ ಸಾವಿರಾರು ಜನ […]