‘ಮುಸ್ಲಿಮರು ‘ಹಿಂದೂ ಬಾಂಧವ’ರಾದ ಪೇಜಾವರರನ್ನು ಕರೆದು ಇಫ್ತಿಯಾರ್ ನೀಡಿದರೆ ಹೋಗಬಹುದೆ??

‘ಮುಸ್ಲಿಮರು ‘ಹಿಂದೂ ಬಾಂಧವ’ರಾದ ಪೇಜಾವರರನ್ನು ಕರೆದು ಇಫ್ತಿಯಾರ್ ನೀಡಿದರೆ ಹೋಗಬಹುದೆ??

ಮೊನ್ನೆ ‘ಮುಸ್ಲಿಂ ಬಾಂಧವ’ರನ್ನು ಪ್ರೀತಿಯಿಂದ ಮಠಕ್ಕೆ ಕರೆದು ಇಫ್ತಿಯಾರ್ ಕೂಟ ನಡೆಸಿದ ಪೇಜಾವರ ಯತಿಗಳನ್ನು ಮೊದಲು ಅಭಿನಂದಿಸೋಣ.  ನಾಳೆ ಅಷ್ಟೇ ಪ್ರೀತಿಯಿಂದ ಮುಸ್ಲಿಂ ಸಮಾಜದವರು ತಮ್ಮ ‘ಹಿಂದೂ ಬಾಂಧವ’ರಾದ ಪೇಜಾವರರನ್ನು ಕರೆದು ಇಫ್ತಿಯಾರ್ ನೀಡಿದರೆ ಪೇಜಾವರರು ಹೋಗಬಹುದೆ ಎಂಬುದನ್ನು ಈಗ ವಿಚಾರ ಮಾಡೋಣ. ಮೊನ್ನೆ ಯತಿಗಳು ತಮಗೆ ‘ಪವಿತ್ರ’ ಎನಿಸಿದ್ದನ್ನು ಮುಸ್ಲಿಮರಿಗೆ ಉಣಬಡಿಸಿ ಪ್ರೀತಿ ಮೆರೆದರು.  ಮುಸ್ಲಿಮರು ಏನನ್ನೂ ಪ್ರಶ್ನಿಸದೆ ಉಂಡು ಬಂದರು. ಇದನ್ನೇ ವಿಶ್ವಾಸ ಎನ್ನುವುದು. ನಾಳೆ ಮುಸ್ಲಿಂ ಸಮಾಜದವರು ಕರೆದು ಅವರಿಗೆ ‘ಪವಿತ್ರ’ ಎಂದು […]

ಲೋಕ ಕಲ್ಯಾಣಕ್ಕಾಗಿ ಉಪವಾಸ (ರೋಜಾ), ದಾನ, ಧರ್ಮ,ಪ್ರಾರ್ಥನೆ: ಭಾವೈಕ್ಯದ ಹಬ್ಬ ರಂಜಾನ್

ಲೋಕ ಕಲ್ಯಾಣಕ್ಕಾಗಿ ಉಪವಾಸ (ರೋಜಾ), ದಾನ, ಧರ್ಮ,ಪ್ರಾರ್ಥನೆ: ಭಾವೈಕ್ಯದ ಹಬ್ಬ ರಂಜಾನ್

 ಮುಸ್ಲಿಂ ಬಾಂಧವರಿಗೆ ರಂಜಾನ್ ಪವಿತ್ರವಾದ  ಹಬ್ಬವಾಗಿದೆ. ಧರ್ಮದ ಆಚರಣೆಯನ್ನು ಮೀರಿದ ಮಾನವೀಯತೆಯ ಸೆಲೆಯನ್ನು ರಂಜಾನ್ ಹಬ್ಬದಲ್ಲಿ  ಕಾಣಬಹುದು. ಬಡವರು, ನಿರ್ಗತಿಕರು, ದೀನದಲಿತರು, ದುರ್ಬಲರಿಗೆ  ಹಸಿವಿನಿಂದ ಮುಕ್ತಿ ನೀಡಲು ಅವರಿಗೆ ಸಹಾಯ ಮಾಡಲು ರಂಜಾನ್ ಪ್ರೇರೇಪಿಸುತ್ತದೆ. ಮನುಷ್ಯನಲ್ಲಿ ಸಣ್ಣತನ, ಕೀಳರಿಮೆ ಕಳೆದು ಹೊಸ ಭರವಸೆ ಮೂಡಿಸಿ, ಗೆಳೆತನ ಮತ್ತು ಮಾನವೀಯತೆಯ ಸೆಲೆ ಉಕ್ಕಿಸುವುದೇ ರಂಜಾನ್ ಹಬ್ಬದ ನೈಜ ಸಂದೇಶ ಎಂದು ಮೌಲ್ವಿಗಳು ಹೇಳುತ್ತಾರೆ. ಉಪವಾಸ ವ್ರತ ಆಚರಣೆ, ಲೋಕ ಕಲ್ಯಾಣಕ್ಕಾಗಿ ಭಗವಂತನಿಗೆ ಪ್ರಾರ್ಥನೆ, ದಾನ, ಧರ್ಮದ ಮೂಲಕ  ಮನುಷ್ಯ […]

ಶಿಕ್ಷಣ, ಸಂಘಟನೆ, ಹೋರಾಟ ಯಾಕೆ? ಜಾಗೃತರಾಗಿ… ಹೋರಾಡಿ… ಸಂಘಟಿತರಾಗಿ

ಶಿಕ್ಷಣ, ಸಂಘಟನೆ, ಹೋರಾಟ ಯಾಕೆ?  ಜಾಗೃತರಾಗಿ… ಹೋರಾಡಿ… ಸಂಘಟಿತರಾಗಿ

ಶಿಕ್ಷಣ, ಸಂಘಟನೆ, ಹೋರಾಟ ಎಂದು ಡಾ.ಬಾಬಾ ಸಾಹೇಬ ಅಂಬೇಡ್ಕರ ಹೇಳಿದ್ದಾರೆಯೇ?  ಬಹುತೇಕ ದಲಿತರು ಕಾರ್ಯಕ್ರಮಗಳಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಪದಗಳನ್ನು ಬಳಸುತ್ತಾರೆ. ಬ್ಯಾನರ್‍ಗಳ ಮೇಲೆ ಆಶ್ಚರ್ಯಕರ ಚಿಹ್ನೆ ಸಹಿತವಾಗಿ (ಶಿಕ್ಷಣಕ್ಕೆ ಒಂದು, ಸಂಘಟನೆಗೆ ಎರಡು ಹಾಗು ಹೋರಾಟಕ್ಕೆ ಮೂರು ಆಶ್ಚರ್ಯಕರ ಚಿಹ್ನೆಗಳನ್ನು) ಮುದ್ರಿಸಿರುತ್ತಾರೆ. ಇದರ ಜಾಡು ಹಿಡಿದು ಎಷ್ಟೋ ಭಾಷಣಕಾರರು ‘ದಲಿತರು ಮೊದಲು ಶಿಕ್ಷಣ ಪಡೆದುಕೊಳ್ಳಿ, ಆನಂತರ ಸಂಘಟನೆ ಕಟ್ಟಿರಿ,  ಆಮೇಲೆ ಹೋರಾಟಕ್ಕಿಳಿಯಿರಿ’ ಎಂದು ಮಾತನಾಡುತ್ತಾರೆ. ಈ ಪದಗಳು  ಗೊತ್ತಿಲ್ಲದ ದಲಿತರೇ ಇಲ್ಲವೆನ್ನುವಷ್ಟು ಇದು  […]

ಪರಿಸರ ದಿನ ಬಂದಿದೆ, ಬನ್ನಿ ಪರಿಸರದೊಂದಿಗೆ ಬಾಂಧವ್ಯ ಬೆಳೆಸೋಣ

ಪರಿಸರ ದಿನ ಬಂದಿದೆ,  ಬನ್ನಿ ಪರಿಸರದೊಂದಿಗೆ ಬಾಂಧವ್ಯ ಬೆಳೆಸೋಣ

ಪರಿಸರ ದಿನಾಚರಣೆ ಮತ್ತೆ ಬಂದಿದೆ. ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆಯ ಮಹತ್ವ ತಿಳಿಸುವ ಮಹತ್ವದ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸಿದೆ. ಪರಿಸರ ದಿನಾಚರಣೆ, ಜಾಗೃತಿ, ವನಮಹೋತ್ಸವ ಹೆಸರಿನಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮಗಳು ಪ್ರತಿ ವರ್ಷದಂತೆ ಈ ಬಾರಿಯೂ ನಡೆಯುತ್ತಿವೆ. ಪ್ರತಿವರ್ಷವೂ ಅಷ್ಟೇ ಸಂಪ್ರದಾಯ ಯಾಕೆ ಎಂದು ಪ್ರಶ್ನಿಸಿಕೊಂಡು ಬದಲಾವಣೆಯ ಹಾದಿಯಲ್ಲಿ ಮುಂದಡಿಯಿಡುವವರು ಈಗ ಬೇಕಾಗಿದ್ದಾರೆ.  ಪರಿಸರದೊಂದಿಗೆ ಮನುಷ್ಯ ಸಂಬಂಧವನ್ನು ಸುಧಾರಿಸಲು ಜಾಗೃತಿ ಮೂಡಿಸಿದರೆ ಅದಕ್ಕಿಂತ ದೊಡ್ಡ ಆಚರಣೆ ಇಲ್ಲ ಅನ್ನೋ ಅಭಿಪ್ರಾಯಗಳು ಕೇಳುತ್ತಿವೆ. ವಿಶ್ವಸಂಸ್ಥೆ 2017ರ ಪರಸರ ದಿನಾಚರಣೆಗೆ ಅರ್ಥಪೂರ್ಣ ಘೋಷ […]

ಗೋವಿನ ಕಥೆ

ಗೋವಿನ ಕಥೆ

  ತುಮಕೂರಿನ ಹಾದಿ ಹಿಡಿದಿದ್ದ ನನಗೆ ತಿಪಟೂರಿನ ಅಯ್ಯನ್ ಬಾವಿ ಗ್ರಾಮದ ಬಳಿ ಹಿಂಡು ಹಿಂಡಾಗಿ‌ ದನ- ಕರುಗಳು ಕೊಪ್ಪಲು ಹಾಕಿರುವುದು ಕಣ್ಣಿಗೆ ಬಿತ್ತು. ಇದೇನು ? !! ನೆನ್ನೆಯಷ್ಟೇ ಗೋಹತ್ಯೆ ನಿಷೇಧ ಕಾಯ್ದೆ ಘೋಷಣೆಯಾಗಿದೆ. ಅಷ್ಟರಲ್ಲಾಗಲೇ ಇಷ್ಟೋ ರಾಸುಗಳನ್ನು ರಕ್ಷಿಸಿ ಬಿಟ್ಟಿತಾ ನಮ್ಮ ಬ್ಯೂರಾಕ್ರಾಟ್ ಎಂದು ಆಶ್ಚರ್ಯದಿಂದ ಕಾರಿನಿಂದಿಳಿದು ಕೊಪ್ಪಲುಗಳ ಹತ್ತಿರ ಹೋದೆ. ಬರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗೋ ಶಾಲೆ ತೆರೆದು ಮೇವು ಉಣಿಸುತ್ತಿರುವುದು ತಿಳಿಯಿತು. ಕಳೆದ ಆರು ತಿಂಗಳಿಂದ ಸುತ್ತ-ಮುತ್ತಲಿನ ವಕ್ಕಲು ಮಕ್ಕಳು […]

ಸಹಭೋಜನ ಮತ್ತು ತಾರತಮ್ಯ

  ರಘೋತ್ತಮ ಹೊ.ಬ. ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರು ತಮ್ಮ ಬರ ಅಧ್ಯಯನ ಪ್ರವಾಸದಲ್ಲಿ ಅಲ್ಲಲ್ಲಿ ದಲಿತರ ಮನೆಗಳಲ್ಲಿ ಉಪಾಹಾರ-ಊಟ ಮಾಡುತ್ತಿದ್ದಾರೆ. ಚಿತ್ರದುರ್ಗ ಮತ್ತು ಬಾಗಲಕೋಟೆಗಳಲ್ಲಿ ಯಡಿಯೂರಪ್ಪ ತಮ್ಮ ದಲಿತಪರ? ಇಂತಹ ಧೋರಣೆಯನ್ನು ಪ್ರದರ್ಶಿಸಿದ್ದಾರೆ. ಮೇಲ್ನೋಟಕ್ಕೆ ಇದು ಉತ್ತಮ ನಡೆಯಂತೆ ಭಾಸವಾಗುತ್ತದೆ. ಆದರೆ ಆಳದಲ್ಲಿ? ಮತ್ತದೇ ತಾರತಮ್ಯದ, ದಲಿತರನ್ನು ಇತರರಿಂದ ದೂರ ಇಟ್ಟು ನೋಡುವ ಸ್ಥಾಪಿತ ಹಿತಾಸಕ್ತಿಗಳ ಯಜಮಾನಿಕೆಯ ಧೋರಣೆಯಂತೆ ಸಾರ್ವಜನಿಕವಾಗಿ ಇದು ಬಿಂಬಿತವಾಗುತ್ತಿರುವುದಂತೂ ಸುಳ್ಳಲ್ಲ. ನಿಜ, ದಲಿತರಿಗೆ ಒಳ್ಳೆಯದಾಗಬೇಕು, ಅವರಿಗೆ ಒಳ್ಳೆಯದು ಮಾಡಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು […]

ಎಂಇಎಸ್ ಪುಂಡಾಟಿಕೆ, ಕಿತಾಪತಿ: ಹಳೆ ರಾಗ ನಿಲ್ಲಿಸಲು ಬೇಕು ಹೊಸ ಮದ್ದು

ಎಂಇಎಸ್ ಪುಂಡಾಟಿಕೆ, ಕಿತಾಪತಿ: ಹಳೆ ರಾಗ ನಿಲ್ಲಿಸಲು ಬೇಕು ಹೊಸ ಮದ್ದು

ಕಠಿಣವಾಗಲಿ ಕರ್ನಾಟಕ: ಕನ್ನಡಿಗರ ಒಕ್ಕೊರಲ ಆಶಯ ಬೆಳಗಾವಿ: ಗಡಿ, ಭಾಷಾ ವಿವಾದವನ್ನು ರಾಜಕೀಯ ಬಂಡವಾಳ ಮಾಡಿಕೊಂಡಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ತನ್ನ ಬಾಲ ಚಿಚ್ಚತೊಡಗಿದೆ.  ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎಂಇಎಸ್ ಅದೇ ಹಳೆಯ ರಾಗ ಹಾಡುವ ಮೂಲಕ ಮತ್ತೆ  ಕಿತಾಪತಿ ಶುರುಮಾಡಿದೆ. ಎಂಇಎಸ್ ಪುಂಡಾಟಿಕೆ, ಕಿತಾಪತಿಗೆ ಕಡಿವಾಣ ಹಾಕಲು ಮತ್ತು ಈ ಸಂಘಟನೆಯ  ಹಳೆ ರಾಗ ನಿಲ್ಲಿಸಲು ಹೊಸ ಮದ್ದು ಬೇಕು ಎನ್ನುವ ಬೇಡಿಕೆಗಳು ದಿನವೂ ಹೆಚ್ಚುತ್ತಲೇ ಇವೆ. ಬೆಳಗಾವಿ, ಖಾನಾಪುರ ,ನಿಪ್ಪಾಣಿ, ಕಾರವಾರ, […]

ಊಟದ ಅಜೆಂಡಾ ಹಿಡಿದು ದಲಿತರಿಗೆ ಅವಮಾನ: ಸಾಕು ಸಾಕಿನ್ನು ಆತ್ಮವಂಚನೆ ನಾಟಕ

ಊಟದ ಅಜೆಂಡಾ ಹಿಡಿದು ದಲಿತರಿಗೆ ಅವಮಾನ: ಸಾಕು ಸಾಕಿನ್ನು ಆತ್ಮವಂಚನೆ ನಾಟಕ

     ಪ್ರಚಾರ, ಅಜೆಂಡಾ, ಒಳ ಸಂಚು ಇಲ್ಲದೆ ಮನುಷ್ಯರಾಗಿ ದಲಿತರ ಮನೆಗಳಿಗೆ ಊಟಕ್ಕೆ ಬನ್ನಿ *ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ದಲಿತರ ಮನೆಗೆ ಹೋಗಿ ಊಟ ಮಾಡಿದ ವಿಷಯ ಹೆಚ್ಚು ಸದ್ದು ಮಾಡುತ್ತಿದೆ. ಇದನ್ನೇ ಮಹಾನ್  ಕ್ರಾಂತಿಯೆಂಬಂತೆ ಕುಣಿಯುತ್ತಿದ್ದಾರೆ.  ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಊಟ-ತಿಂಡಿ ಮಾಡುವ ಘೋಷಣೆಯೊಂದಿಗೆ ಹೊರಟಿದ್ದು,  ಇದರ ಬೆನ್ನಲ್ಲಿ  ಹಲವು  ಪ್ರಶ್ನೆಗಳು ಈಗ ತಲೆ ಎತ್ತಿವೆ.  ದಲಿತರನ್ನು  ಸಾಮಾಜಿಕ ,ಅಧಿಕಾರ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದ ಕಚ್ಚಾ ಸರಕಿನಂತೆ ಇಂದಿಗೂ […]

ಹರಡಿದೆ ಎಲ್ಲೆಲ್ಲೂ ಬುದ್ಧನ ಬೆಳಕು

ಹರಡಿದೆ ಎಲ್ಲೆಲ್ಲೂ ಬುದ್ಧನ ಬೆಳಕು

ಗೌತಮ ಬುದ್ಧ ನಾನು ಕಂಡಂತೆ (ಬುದ್ಧ ಹುಣ್ಣಿಮೆ ವಿಶೇಷಕ್ಕೆ)    ಗೌತಮ ಬುದ್ಧ ಈ ನೆಲದಲ್ಲಿ ಹುಟ್ಟಿ ಸರಿಯಾಗಿ 2561 ವರ್ಷಗಳಾದವು. ಡಾ.ಬಾಬಾಸಾಹೇಬ ಅಂಬೇಡ್ಕರ್ 1956ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದಾಗ ಬುದ್ಧನು ಹುಟ್ಟಿ ಸರಿಯಾಗಿ 2,500 ವರ್ಷ ಗಳಾಗಿದ್ದವು. ಬುದ್ಧನು ಜನ್ಮ ತಾಳಿ ಈಗ 2,561 ವರ್ಷಗಳ  ಈ ದೀರ್ಘಾವಧಿಯಲ್ಲಿ ಅವನು ಪ್ರವೇಶಿಸದ ದೇಶವಿಲ್ಲ ಹಾಗೂ ಪ್ರಭಾವಿಸದ ಮನಸಿಲ್ಲ.  ವಿಶ್ವದ ಸುಮಾರು 32 ದೇಶಗಳಲ್ಲಿ ಬೌದ್ಧ ಧರ್ಮ ಬೆಳೆದು ನಿಂತಿದೆ. ಜಪಾನ, […]