ಟಾಟಾ ಎಸ್ ಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಟಾಟಾ ಎಸ್ ಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಹಾಪುರ: ಟಾಟಾ ಎಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಶಹಾಪುರ ಕೊಳೂರು ಅಗಸಿ ಹತ್ತಿರ ಬೀದರ – ಬೆಂಗಳೂರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಬಿರಾಳ ಗ್ರಾಮದ ಬಸವರಾಜ್ ರಾಮರಡ್ಡಿಗೌಡ ಹೊಸಳ್ಳಿ(31) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಶಹಾಪುರ ನಗರದಲ್ಲಿ ತರಕಾರಿ ಮಾರಾಟ ಮಾಡಿ ಎಸಿ ಸ್ಟೋರೇಜ್ ಬಳಿ ಇರುವ ಸಂಬಂಧಿಕರ ಮನೆಗೆ ತರಳುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಸವಾರ ಮುಂದೆ ಹೊರಟಿದ್ದ ಟಾಟಾ ಎಸ್ ಗೆ […]

ಚಿಕ್ಕೋಡಿ ಜಿಲ್ಲೆ ರಚನೆಗೆ ಗಮನ ಹರಿಸದ ಸಿಎಂ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ

ಚಿಕ್ಕೋಡಿ ಜಿಲ್ಲೆ ರಚನೆಗೆ ಗಮನ ಹರಿಸದ ಸಿಎಂ ಸಿದ್ಧರಾಮಯ್ಯ ವಿರುದ್ಧ ಆಕ್ರೋಶ

  ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆ ರಚನೆ ಮಾಡುವ ಕುರಿತು ಮೇಲಿಂದ ಮೇಲೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸಿಎಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಪಟ್ಟಣದ ಮಿನಿವಿಧಾನ ಸೌದ ಎದುರು ಕಳೆದ 9 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿದೆ. 14 ತಾಲೂಕುಗಳನ್ನು […]

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ, ಪ್ಲಸ್ ಪಾಯಿಂಟ್ ಅಂದ್ರೆ ನಾವು ಸುಳ್ಳು ಹೇಳಲ್ಲ: ರಾಹುಲ್ ಗಾಂಧಿ

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ, ಪ್ಲಸ್ ಪಾಯಿಂಟ್ ಅಂದ್ರೆ ನಾವು ಸುಳ್ಳು ಹೇಳಲ್ಲ: ರಾಹುಲ್ ಗಾಂಧಿ

  ಕಲಬುರಗಿ: ನಮ್ಮ ಸರಕಾರ ನುಡಿದಂತೆ ನಡೆಯುತ್ತದೆ…ನಮ್ಮ ಪ್ಲಸ್ ಪಾಯಿಂಟ್ ಅಂದ್ರೆ ನಾವು ಸುಳ್ಳು ಹೇಳಲ್ಲ…371(j) ಮಾಡುವಾಗ ಅಡ್ವಾಣಿ ವಿರೋಧಿಸಿದ್ದರು…ನಾನು ಈ ಭಾಗಕ್ಕೆ ಬಂದಾಗ ಇಲ್ಲಿನ ಜನರ ಪರಿಸ್ಥಿತಿ ನೋಡಿದ್ದೆ…ಅದಕ್ಕೆ 371(j) ಮಾಡಿದೇವು ಎಂದು ಎಐಸಿಸಿ ಅದ್ಯಕ್ಷ ತಾಹುಲ್ ಗಾಂಧಿ ಹೇಳಿದರು. ಜೇವರ್ಗಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ನರೇಂದ್ರ ಮೋದಿ ಸುಳ್ಳು ಹೇಳಿದ್ರು…ಯುವಕರಿಗೆ ಎರಡು ಕೋಟಿ ಉದ್ಶೋಗˌ ಪ್ರತಿಯೊಬ್ಬ ಭಾರತೀಯ ಪ್ರಜೆಗೆ 15 ಲಕ್ಷ ಹಾಕ್ತೇನೆ ಅಂತ ಸುಳ್ಳು […]

ಬೆಟಗೇರಿ ಗ್ರಾಮಕ್ಕೆ 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಅರ್ಪಣೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಟಗೇರಿ ಗ್ರಾಮಕ್ಕೆ 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಅರ್ಪಣೆ: ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಬೆಟಗೇರಿ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಅರ್ಪಣೆ ಮಾಡಿರುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರವಿವಾರ ರಾತ್ರಿ ಗ್ರಾಮ ಪಂಚಾಯತಿಯಿಂದ ನಡೆದ 2.02 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗಕ್ಕೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಅಭಿವೃದ್ಧಿಯ ಮೂಲಮಂತ್ರ ಎಂಬಂತೆ ಜನತೆಯ ಅಹವಾಲುಗಳಿಗೆ ಸ್ಪಂದಿಸಿರುವುದಾಗಿ ಹೇಳಿದರು. ಗ್ರಾಮ ಪಂಚಾಯತಿ ಸಮೀತಿಯವರು […]

ಸಾಲಭಾದೆ: ಹಾವೇರಿಯಲ್ಲಿ ರೈತ ಆತ್ಮಹತ್ಯೆ

ಸಾಲಭಾದೆ: ಹಾವೇರಿಯಲ್ಲಿ ರೈತ ಆತ್ಮಹತ್ಯೆ

ಹಾವೇರಿ: ಸಾಲಭಾದೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸೋಮಪ್ಪ ಚತ್ರಮನಿ (40) ಆತ್ಮಹತ್ಯೆ ಶರಣಾದ ರೈತ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 2 ಲಕ್ಷ ಕ್ಕೂ ಹೆಚ್ಚು  ಸಾಲ ಮಾಡಿದ್ದ ಮಳೆ ಇಲ್ಲದೆ ಬೆಳೆದ ಬೆಳೆ ಕೈ ಕೊಟ್ಟ ಹಿನ್ನಲೆ ಮನನೊಂದು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ರಜಿನಿಕಾಂತ್ ಅವರದ್ದು ಕೇಸರಿ ಬಣ್ಣ ಆಗಿರಕ್ಕಿಲ್ಲ: ಕಮಲ್ ಹಾಸನ್

ರಜಿನಿಕಾಂತ್ ಅವರದ್ದು ಕೇಸರಿ ಬಣ್ಣ ಆಗಿರಕ್ಕಿಲ್ಲ: ಕಮಲ್ ಹಾಸನ್

ಹೊಸದಿಲ್ಲಿ: ಅಮೆರಿಕಾ ಪ್ರವಾಸದಲ್ಲಿರುವ ಬಹುಭಾಷಾ ನಟ ಕಮಲ್ ಹಾಸನ್,  ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣ, ತಮ್ಮ ಕನಸು ಆಗಿದ್ದು ಕೆಂಪು ನನ್ನ ರಾಜಕೀಯ ಹೊದಿಕೆ ಅಲ್ಲ ಎಂದು ಹೇಳಿದ್ದಾರೆ. ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಪೀಪಲ್ ರೈಟ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಕಮಲ್ ಹಾಸನ್ , ರಜಿನಿಕಾಂತ್ ಜೊತೆಗಿನ ರಾಜಕೀಯ ಮೈತ್ರಿಯ ಬಗ್ಗೆಯೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.  ಸದ್ಯದ ಪರಿಸ್ಥಿತಿಗೆ ಮೈತ್ರಿ ಅಸಾಧ್ಯವಾಗಿದ್ದು, ರಜಿನಿಕಾಂತ್ ಅವರದ್ದು ಕೇಸರಿ ಬಣ್ಣವಾಗಿರಲಾರದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.  “ನಮ್ಮ ಸಿದ್ದಾಂತವೇ ಬೇರೆಯಾಗಿದೆ. ರಜಿನಿಕಾಂತ್ ಅವರ […]

ಕಾರು-ಬೈಕ್ ಮಧ್ಯೆ ಭೀಕರ ಅಪಘಾತ: ಇಬ್ಬರು ದಾರುಣ ಸಾವು

ಕಾರು-ಬೈಕ್ ಮಧ್ಯೆ ಭೀಕರ ಅಪಘಾತ: ಇಬ್ಬರು ದಾರುಣ ಸಾವು

ಬಾಗಲಕೋಟೆ:  ಕಾರು- ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೀರಿಕೇರಿ ಕ್ರಾಸ್ ಬಳಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದ ನಿಂಗಪ್ಪ ಮಲ್ಲಾಡರ, ಬಾಗವ್ವ ಸೊನ್ನದ ಮೃತ ದುರ್ದೈವಿಗಳು. ನಿಂಗಪ್ಪ ಬಾಗಲಕೋಟೆಯ ಸಂಗೊಳ್ಳಿರಾಯಣ್ಣ ಯುವಘರ್ಜನೆ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಬೈಕ್ ಮೇಲೆ ಗ್ರಾಮದ ಕಡೆ ತೆರಳುತ್ತಿರುವಾಗ ಅವಘಡ ಸಂಭವಿಸಿದೆ. ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಲಹೊಂಗಲ :ಮಟಕಾ ಆಡುತ್ತಿದ್ದ ಇಬ್ಬರ ಬಂಧನ

ಬೈಲಹೊಂಗಲ :ಮಟಕಾ ಆಡುತ್ತಿದ್ದ ಇಬ್ಬರ ಬಂಧನ

ಬೈಲಹೊಂಗಲ: ತಾಲೂಕಿನ ಮಾಸ್ತಮಡಿ 9 ಗ್ರಾಮದಲ್ಲಿ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂದಿಸಿ ರೂ. 1770 ಹಾಗೂ ಮಟಕಾ ಚೀಟಿಯನ್ನು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ. ಬಂದಿತರನ್ನು ಮಾಸ್ತಮಡಿ 9 ಗ್ರಾಮದ ಸಿದ್ದಪ್ಪ ಮಲ್ಲಪ್ಪ ಹಣಬರಟ್ಟಿ (65), ನೀಲಪ್ಪ ಯಲ್ಲಪ್ಪ ಖಾನಪ್ಪನವರ (55) ಎಂದು ಗುರುತಿಸಲಾಗಿದೆ. ಈ ಪ್ರಕರಣ ನೇಸರಗಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.

ಬೈಲಹೊಂಗಲ: ನೇಣು ಬೀಗಿದು ಯುವಕ ಆತ್ಮಹತ್ಯೆ

ಬೈಲಹೊಂಗಲ: ನೇಣು ಬೀಗಿದು ಯುವಕ ಆತ್ಮಹತ್ಯೆ

ಬೈಲಹೊಂಗಲ: ಮಾನಸಿಕವಾಗಿ ಯುವಕನೋವ೯ನು ನೊಂದುಕೊಂಡು ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೖತನನ್ನು ವಿಶಾಲ ರಾಮಚಂದ್ರಪ್ಪ ಕಮ್ಮಾರ (27) ಎಂದು ಗುರುತಿಸಲಾಗಿದೆ. ಈ ಪ್ರಕರಣ ಬೈಲಹೊಂಗಲ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.  

ಕರ್ತವ್ಯ ಲೋಪ: ಕಾಗವಾಡ ಪಿ ಎಸ್ ಐ ಮತ್ತು ಪೇದೆ ಅಮಾನತು

ಕರ್ತವ್ಯ ಲೋಪ: ಕಾಗವಾಡ ಪಿ ಎಸ್ ಐ ಮತ್ತು ಪೇದೆ ಅಮಾನತು

  ಬೆಳಗಾವಿ:ಕರ್ತವ್ಯ ಲೋಪ ಎಸಗಿದ ಆರೋಪದಡಿ  ಕಾಗವಾಡ ಪೊಲೀಸ್ ಠಾಣೆಯ ಪಿ ಎಸ್ ಐ ಸಮೀರ್ ಮುಲ್ಲಾ ಮತ್ತು ಪೇದೆ ಆರ್ ಎ ಕಮತೆ ಅವರನ್ನು ಅಮಾನತು ಮಾಡಲಾಗಿದೆ. ಕೊಲೆ ಪ್ರಕರಣ ಒಂದಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸುದೀರ್ ಕುಮಾರ್ ರೆಡ್ಡಿ ಅಮಾನತು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ.  

1 2 3 39