ಸುಳ್ಳು ಸಮೀಕ್ಷೆಗಳಿಂದ ನಿರಾಶರಾಗಬೇಡಿ, ಎಚ್ಚರದಿಂದಿರಿ: ಕೈ ಕಾರ್ಯಕರ್ತರಿಗೆ ರಾಹುಲ್ ಸಲಹೆ

ಸುಳ್ಳು ಸಮೀಕ್ಷೆಗಳಿಂದ ನಿರಾಶರಾಗಬೇಡಿ, ಎಚ್ಚರದಿಂದಿರಿ: ಕೈ ಕಾರ್ಯಕರ್ತರಿಗೆ ರಾಹುಲ್ ಸಲಹೆ

ಹೊಸದಿಲ್ಲಿ: ಸುಳ್ಳು ಚುನಾವನೋತ್ತರ ಸಮೀಕ್ಷೆಗಳಿಂದ ನಿರಾಶರಾಗಬೇಡಿ ಎಚ್ಚರದಿಂದಿರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಕೈ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಲೋಕಸಭೆ ಫಲಿತಾಂಶಕ್ಕೂ ಮುನ್ನ ಟ್ವೀಟ್ ಮೂಲಕ ಕಾರ್ಯಕರ್ತರಿಗೆ ಮನವಿ ಮಾಡಿರುವ ರಾಹುಲ್ ” ಮುಂದಿನ 24 ಘಂಟೆಗಳು ಅತ್ಯಂತ ಮಹತ್ವದ್ದಾಗಿವೆ. ದೃತಿಗೇಡದೆ ಎಚ್ಚರದಿಂದಿರಿ. ನೀವು ಸತ್ಯದ ಸಲುವಾಗಿ ಹೋರಾಟ ನಡೆಸುತ್ತಿದ್ದೀರಾ, ಸುಳ್ಳು ಸಮೀಕ್ಷೆಗಳು ಮತ್ತು ಸುಳ್ಳು ಪ್ರಚಾರಗಳ ಮೇಲೆ ನಂನಿಕೊಂಡು ನಿರಾಶರಾಗಬೇಡಿ. ತಮ್ಮ ಮೇಲೆ ಮತ್ತು ಕಾಂಗ್ರೆಸ್ ಪಕ್ಷ ಮೇಲೆ ನಂಬಿಕೆ ಇಡಿ. ನಿಮ್ಮ ಶ್ರಮ […]

ಕುಮಾರಸ್ವಾಮಿ ನಾಳೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ: ಡಿವಿಎಸ್ ಹೊಸ ಬಾಂಬ್

ಕುಮಾರಸ್ವಾಮಿ ನಾಳೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ: ಡಿವಿಎಸ್ ಹೊಸ ಬಾಂಬ್

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಬೆಳಗ್ಗೆ ವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ, ಗರಿಷ್ಠ ಎಂದರೆ ನಾಡಿದ್ದು ಬೆಳಗ್ಗೆ ಮಾತ್ರ ಸಿಎಂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಹೊಸಬಾಂಬ್ ಸಿಡಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 24 ರಂದು ಕುಮಾರಸ್ವಾಮಿ ಶೇ ನೂರಕ್ಕೆ ನೂರರಷ್ಟು ಅಧಿಕಾರ ಕಳೆದುಕೊಳ್ಳಿದ್ದಾರೆ. ಹೊಸ ಸರಕಾರ ರಚಿಸಲು ನಾವು ಸಿದ್ದತೆ ನಡೆಸಿಕೊಳ್ಳಲಿದ್ದೇವೆ ಎಂದರು. ಕಳೆದ ಬಾರಿಗಿಂತ ಗೆಲುವಿನ ಅಂತರ ಸ್ವಲ್ಪ ಕಡಿಮೆ ಆಗಬಹುದು, ಆದರೆ ನನಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು […]

ಅಂತರ್ ರಾಜ್ಯ ಜಿಂಕೆ ಬೇಟೆಗಾರರ ಬಂಧನ

ಅಂತರ್ ರಾಜ್ಯ ಜಿಂಕೆ ಬೇಟೆಗಾರರ ಬಂಧನ

ಕಲಬುರ್ಗಿ: ಅಂತರ್ ರಾಜ್ಯ ಜಿಂಕೆ ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆ ನಾಗಲಗೀತ ಮಂಡಲ ಗ್ರಾಮದಲ್ಲಿ ಹೈಫೈ ಕಾರಿನಲ್ಲಿ ಬಂದು ಜಿಂಕೆ ಬೇಟೆಯಾಡಿ ಮಾಂಸ ಚರ್ಮ ಸಾಗಿಸುತ್ತಿದ್ದ ಖದೀಮರನ್ನು ಬಂಧಿಸಲಾಗಿದೆ. ಕಲ್ಬುರ್ಗಿಯ ಮಹಮ್ಮದ್ ಶಾಕೀರ್, ಮಹಮ್ಮದ್ ಅಬ್ದುಲ್ ವಾಹಬ್, ಮಹಮ್ಮದ್ ನಿಜಾಜ್, ಹೈದರಾಬಾದಿನ ಮಹಮ್ಮದ್ ಮುಕ್ರಂ ಹಾಗೂ ಮಹಮ್ಮದ್ ಮುನೀರ್ ಬಂಧಿತ ಆರೋಪಿಗಳಾಗಿದ್ದು ಬೇಟೆಗೆ ಬಳಸಿದ ಸ್ಕಾರ್ಪಿಯೋ ವಾಹನ, 30.60 ಸ್ಪೋರ್ಟ್ಸ್ ರೈಫಲ್, 12 ಜೀವಂತ ಗುಂಡು, 4 ಚಾಕು, ಜಿಂಕೆ […]

ಕೃಷ್ಣಾ ತೀರದ ಜನತೆಯನ್ನು ಬೆಂಬಲಿಸಿ ಕನ್ನಡ ಪರ,ರೈತ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಕೃಷ್ಣಾ ತೀರದ ಜನತೆಯನ್ನು ಬೆಂಬಲಿಸಿ ಕನ್ನಡ ಪರ,ರೈತ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಇಂದು ಅಥಣಿ ಬಂದ್ ಕರೆ ನೀಡಿಲಾಗಿದ್ದು, ಬಂದ್ ಗೆ ಬೆಂಬಲಿಸಿ ಬೆಳಗಾವಿಯಲ್ಲಿಯೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆ ಮುಖಂಡರು, ಕೃಷ್ಣಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಹಿಡ್ಕಲ್ ಜಲಾಶಯದಿಂದ 94 ಕಿ.ಮೀ.ದೂರದ ಕೃಷ್ಣಾ ನದಿಗೆ […]

ಮಮದಾಪೂರನಲ್ಲಿ ಬಸವೇಶ್ವರ್ ಪುತ್ಥಳಿ ಶಂಕು ಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ…!

ಮಮದಾಪೂರನಲ್ಲಿ ಬಸವೇಶ್ವರ್ ಪುತ್ಥಳಿ ಶಂಕು ಸ್ಥಾಪನೆ ನೆರವೆರಿಸಿದ ಶಾಸಕ ರಮೇಶ ಜಾರಕಿಹೊಳಿ…!

ಗೋಕಾಕ: ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಗ್ರಾಮಸ್ಥರಿಂದ ನಿರ್ಮಾಣವಾಗುತ್ತಿರುವ ಶ್ರೀ ಬಸವೇಶ್ವರ ಪುತ್ಥಳಿ ಸ್ಥಾಪನೆಯ ಶಂಕುಸ್ಥಾಪನೆಯನ್ನು ಶಾಸಕ ರಮೇಶ ಜಾರಕಿಹೊಳಿ ಶನಿವಾರದಂದು ನೇರವೆರಿಸಿದರು. ಈ ಸಂದರ್ಭದಲ್ಲಿ ಚರಮೂರ್ತೇಶ್ವರ ಸ್ವಾಮಿಜಿ, ಮೌನ ಮಲ್ಲಿಕಾರ್ಜುನ ಸ್ವಾಮಿಜಿ, ಶಾಂತಾರೂಢ ಸ್ವಾಮಿಜಿ, ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ, ಟಿ ಆರ್ ಕಾಗಲ, ತಾಪಂ ಸದಸ್ಯ ಸಿದ್ದಪ್ಪ ಕಮತ, ಗ್ರಾಪಂ ಅಧ್ಯಕ್ಷೆ ನಾಗವ್ವ ಸಿಂಗಾಡಿ, ಉಪಾಧ್ಯಕ್ಷ ಹನಮಂತ ಗೋಪಾಳಿ, ಶಂಕರಗೌಡ ಪಾಟೀಲ, ಮಮದಾಪೂರ, ಮರಡಿ ಶಿವಾಪೂರ, ಅಜ್ಜನಕಟ್ಟಿ, ದುಂಡಾನಟ್ಟಿ ಗ್ರಾಮಗಳ ಹಿರಿಯರು, ಗ್ರಾಮಸ್ಥರು ಸೇರಿದಂತೆ ಇತರರು […]

ಕೃಷ್ಣಾ ನದಿಗೆ ನೀರು ಬಿಡದ ಮಹಾ ಸರ್ಕಾರ: ಸಚಿವ ಡಿಕೆಶಿ ಬೇಸರ

ಕೃಷ್ಣಾ ನದಿಗೆ ನೀರು ಬಿಡದ ಮಹಾ ಸರ್ಕಾರ: ಸಚಿವ ಡಿಕೆಶಿ ಬೇಸರ

“ಕೃಷ್ಣಾ ನದಿಗೆ ಇಳಕಲ್ ಜಲಾಶಯದ 1 ಟಿಎಂಸಿ ನೀರು ಬಿಡುಗಡೆ” ಹುಬ್ಬಳ್ಳಿ: ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ಇನ್ನೂ ನೀರು ಬಿಡದ ಕಾರಣ ಇಳಕಲ್ ಜಲಾಶಯದಲ್ಲಿ ಉಳಿದಿರುವ 1 ಟಿಎಂಸಿ ನೀರನ್ನೂ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು. ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ನೀರು ಬಿಡಲು ಸಮ್ಮತಿ ಸೂಚಿಸಿದ್ದರು ಇನ್ನೂ ನೀರು ಬಿಟ್ಟಿಲ್ಲ ಎಂದು ಸಚಿವರು ಬೇಸರ್ ವ್ಯಕ್ತ ಪಡಿಸಿದರು. ಅಥಣಿ ಮತ್ತು ಕಾಗವಾಡ ಭಾಗದ ರೈತರು ಮತ್ತು […]

ಪ್ರಜ್ಞಾಸಿಂಗ್ ಕ್ಷಮೆ ಯಾಚನೆ: ಮೋದಿ ಏನಂದ್ರು ಗೊತ್ತಾ…?

ಪ್ರಜ್ಞಾಸಿಂಗ್ ಕ್ಷಮೆ ಯಾಚನೆ: ಮೋದಿ ಏನಂದ್ರು ಗೊತ್ತಾ…?

ಹೊಸದಿಲ್ಲಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿ ನಂತರ ಕ್ಷಮೆ ಕೇಳಿದ್ದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರ ವರ್ತನೆಗೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ಞಾಸಿಂಗ್ ಠಾಕೂರ್ ಇಂತಹ ಹೇಳಿಕೆ ನೀಡಬಾರದಿತ್ತು. ಪ್ರಜ್ಞಾವಂತ ಸಮಾಜ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ. ತಮ್ಮ ಹೇಳಿಕೆ ಬಗ್ಗೆ ಅವರು ಕ್ಷಮೆ ಕೇಳಿರಬಹುದು. ಆದರೆ, ನಾನು ಕ್ಷಮಿಸೊಲ್ಲ ಎಂದು ಪ್ರಧಾನಿ ಹೇಳಿದ್ದಾರೆ. Views: 136

ಪಂಜಾಬ್ ನಲ್ಲಿ ಕಾಂಗ್ರೆಸ್ ಸೋತರೆ ರಾಜೀನಾಮೆ: ಅಮರಿಂದರಸಿಂಗ್ ಸವಾಲು !

ಪಂಜಾಬ್ ನಲ್ಲಿ ಕಾಂಗ್ರೆಸ್ ಸೋತರೆ ರಾಜೀನಾಮೆ: ಅಮರಿಂದರಸಿಂಗ್ ಸವಾಲು !

ಚಂಡೀಗಡ (ಪಂಜಾಬ್): ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸೀಟುಗಳು ಸಿಗದಿದ್ದರೆ ಹೊಣೆ ಹೊತ್ತುಕೊಂಡು ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಅಮರಿಂದರಸಿಂಗ್ ಗುರುವಾರ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರದಿದ್ದರೆ ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಹೇಳಿಕೆಯೊಂದರಲ್ಲಿ ತಿಳಿಸಿರುವ ಅವರು, ರಾಜ್ಯದ ಎಲ್ಲ ಸಚಿವರು ಮತ್ತು ಶಾಸಕರನ್ನು ಹೊಣೆಗಾರರನ್ನಾಗಿಸಲಾಗಿದೆ ಎಂದು ಹೇಳಿದ್ದಾರೆ. ಸೋಲು-ಗೆಲುವಿಗೆ ಎಲ್ಲ ಮಂತ್ರಿಗಳು ಮತ್ತು ಶಾಸಕರನ್ನು ಹೊಣೆಗಾರರನ್ನಾಗಿ ಮಾಡಲು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದೆ. ಅದೇ ಹೊಣೆಯನ್ನು ತಾವೂ […]

ವಸತಿ ನಿಲಯಗಳ ಗುರಿ ಹೆಚ್ಚಿಸಲು ಆಗ್ರಹ

ವಸತಿ ನಿಲಯಗಳ ಗುರಿ ಹೆಚ್ಚಿಸಲು ಆಗ್ರಹ

ಸುರಪುರ: ಹಿಂದುಳಿದ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಟಾರ್ಗೇಟನ್ನು ಹೆಚ್ಚಿಸಬೇಕೆಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಹೇಳಿದರು. ನಗರದ ಮಡಿವಾಳ ಮಾಚದೇವ ವೃತ್ತದ ಹತ್ತಿರ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ನಮ್ಮ ತಾಲೂಕು ಹಿಂದುಳಿಯಲು ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ಮತ್ತು ವಸತಿ ನಿಲಯಗಳಲ್ಲಿ ಪ್ರವೇಶ ದೊರಕದೆ ಪ್ರತಿದಿನ ಬಸ್ ಮತ್ತು […]

ಬೆಳಂ ಬೆಳಗ್ಗೆ ಮೈಸೂರಲ್ಲಿ ಪೊಲೀಸ್ ಎನ್ ಕೌಂಟರ್: ಒಬ್ಬ ಆರೋಪಿ ಸಾವು!

ಬೆಳಂ ಬೆಳಗ್ಗೆ ಮೈಸೂರಲ್ಲಿ ಪೊಲೀಸ್ ಎನ್ ಕೌಂಟರ್:  ಒಬ್ಬ ಆರೋಪಿ ಸಾವು!

ಮೈಸೂರು: ನಗರದಲ್ಲಿ ಇಂದು ಬೆಳಂ ಬೆಳಗ್ಗೆ ಪೊಲೀಸರಿಂದ ಎನ್ ಕೌಂಟರ್ ನಡೆದಿದೆ. ಈ ವೇಳೆ ಗುಂಡು ತಗುಲಿ ಆರೋಪಿಯೊಬ್ಬ ಸಾವನ್ನಪ್ಪಿದ್ದಾನೆ. ನಗರದ ಹಬ್ಬಾಳ್ ರಿಂಗ್ ರಸ್ತೆ ಬಳಿ ಅಪಾರ್ಟ್ ಮೆಂಟ್ ವೊಂದರಲ್ಲಿ ಮನಿ ಡಬ್ಲಿಂಗ್ ನಲ್ಲಿ ತೊಡಗಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಇನ್ಸ್ ಪೆಕ್ಟರ್ ಗೆ ಗನ್ ತೋರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಅವರು ಮೂರು ಆರೋಪಿಗಳ ಮೇಲೆ ಪೈರಿಂಗ್ ಮಾಡಿದ್ದಾರೆ. ಒಬ್ಬನಿಗೆ […]