ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಫೈನಲ್, ಬೆಳಗಾವಿಗೆ ಇಬ್ಬರ ಹೆಸರು ಶಿಫಾರಸ್ಸು: ಸತೀಶ ಜಾರಕಿಹೊಳಿ

ಚಿಕ್ಕೋಡಿಗೆ ಪ್ರಕಾಶ ಹುಕ್ಕೇರಿ ಫೈನಲ್, ಬೆಳಗಾವಿಗೆ ಇಬ್ಬರ ಹೆಸರು ಶಿಫಾರಸ್ಸು: ಸತೀಶ ಜಾರಕಿಹೊಳಿ

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ” ಕೈ ” ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಕಣಕ್ಕಿಳಿಯಲಿದ್ದು, ಬೆಳಗಾವಿ ಕ್ಷೇತ್ರಕ್ಕೆ ಇಬ್ಬರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಹುಕ್ಕೇರಿ ಬಿಟ್ಟು ಬೇರೆ ಆಕಾಂಕ್ಷಿಗಳು ಇಲ್ಲದಿರುವ ಕಾರಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ತೋರಿಸಿದವರ ಪೈಕಿ ಶಿವಕಾಂತ ಸಿದ್ನಾಳ ಹಾಗೂ ಸಾಧುನವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ಮತ್ತು ಚಿಕ್ಕೋಡಿ […]

ಮೊದಲ ಲೋಕಪಾಲರಾಗಿ ಪಿ.ಸಿ. ಘೋಷ್ ನೇಮಕ

ಮೊದಲ ಲೋಕಪಾಲರಾಗಿ ಪಿ.ಸಿ. ಘೋಷ್ ನೇಮಕ

ಹೊಸದಿಲ್ಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ ನೇಮಕಗೊಂಡಿದ್ದಾರೆ. ಲೋಕಪಾಲರನ್ನು ನೇಮಿಸುವಂತೆ ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡವಿತ್ತು. ಅಂತೂ ಅಧಿಕಾರಾವಧಿಯ ಕೊನೆ ಗಳಿಗೆಯಲ್ಲಿ ಸರಕಾರ ಮೊದಲ ಲೋಕಪಾಲರನ್ನು ನೇಮಕಗೊಳಿಸಿದೆ.

ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ದೆಹಲಿಗೆ ದೌಡಾಯಿಸಿದ ಪರಮೇಶ್ವರ್ !

ತುಮಕೂರು ಕ್ಷೇತ್ರ ಉಳಿಸಿಕೊಳ್ಳಲು ದೆಹಲಿಗೆ ದೌಡಾಯಿಸಿದ ಪರಮೇಶ್ವರ್ !

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೇ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿರುವ ಡಿಸಿಎಂ ಜಿ. ಪರಮೇಶ್ವರ ಅದಕ್ಕಾಗಿ ದೆಹಲಿ ಮುಖಂಡರ ಮೊರೆ ಹೋಗಿದ್ದಾರೆ. ಹಾಲಿ ಸಂಸದ ಮುದ್ದುಹನುಮೇಗೌಡರನ್ನು ಕೈಬಿಟ್ಟು ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ನೀಡಿರುವ ಕುರಿತಂತೆ ತೀವ್ರ ಅಸಮಾಧಾನ ಹೊರಹಾಕಿದ್ದ ಪರಮೇಶ್ವರ, ಕ್ಷೇತ್ರವನ್ನು “ಕೈ ” ಪಕ್ಷಕ್ಕೆ ಉಳಿಸಿಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ […]

ತೆನೆ ಬಿಟ್ಟು ಆನೆ ಸೇರಿದ ದ್ಯಾನಿಶ ಅಲಿ: ಜೆಡಿಎಸ್ ಗೆ ಬಿಗ್ ಶಾಕ್

ತೆನೆ ಬಿಟ್ಟು ಆನೆ ಸೇರಿದ ದ್ಯಾನಿಶ ಅಲಿ: ಜೆಡಿಎಸ್ ಗೆ ಬಿಗ್ ಶಾಕ್

ಲಕನೌ: ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ದ್ಯಾನೀಶ್ ಅಲಿ ಬಹುಜನ ಸಮಾಜವಾದಿ ಪಕ್ಷ ಸೇರಿ ಜೆಡಿಎಸ್ ನಾಯಕರಿಗೆ ಶಾಕ್ ನೀಡಿದ್ದಾರೆ. ಇಂದು ಅಧಿಕೃತವಾಗಿ ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷಕ್ಕೆ ಸೇರಿದ ದ್ಯಾನಿಶ್ ಅಲಿ ಅವರನ್ನು ಬಿಎಸ್ ಪಿ ನಾಯಕರು ಬರಮಾಡಿಕೊಂಡಿದ್ದಾರೆ. ರಾಜ್ಯದಲ್ಲಿಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದದ್ಯಾನಿಶ್ ಅಲಿಧೀಡಿರ ಆಗಿ ಜೆಡಿಎಸ್ ಪಕ್ಷಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಮೀರಟ್ ಕ್ಷೇತ್ರದಿಂದ ಬಿಎಸ್ ಪಿ ಪಕ್ಷದ ಅಭ್ಯರ್ಥಿಯಾಗಿ […]

ಹೃದಯಾಘಾತಕ್ಕೊಳಗಾದ ವಿಶ್ವನಾಥ್ ಆರೋಗ್ಯದಲ್ಲಿ ಚೇತರಿಕೆ

ಹೃದಯಾಘಾತಕ್ಕೊಳಗಾದ ವಿಶ್ವನಾಥ್ ಆರೋಗ್ಯದಲ್ಲಿ ಚೇತರಿಕೆ

ಹೈದರಾಬಾದ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಗೆ ಲಘು ಹೃದಯಾಘಾತವಾಗಿದ್ದು, ಸದಸ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ನಿನ್ನೆ ಸಂಜೆ ಹೈದರಾಬಾದ್ ನಲ್ಲಿ ವಿಶ್ವನಾಥ್ ಗೆ ಲಘು ಹೃದಯಾಘಾತ ಸಂಭವಿಸಿದ್ದು, ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರು ಹೈದರಾಬಾದ್ ನ ಆಸ್ಪತ್ರೆ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಬಿದ್ದರೆ ತಮ್ಮ ಆಸ್ಪತ್ರೆಗೆ ಕರೆತರುವುದಾಗಿ ತಿಳಿಸಿದ್ದಾರೆ.

ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು: ಭಾರತೀಯ ಜನತಾಪಕ್ಷದ ಕೋರ್ ಕಮಿಟಿ ಸಭೆ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸುವ ಕುರಿತು ಚರ್ಚೆಯಾಗಲಿದೆ. ಚರ್ಚೆಯ ನಂತರ ಪಟ್ಟಿ ಸಿದ್ದಗೊಳಿಸಿ ಕೇಂದ್ರ ಚುನಾವಣಾ ಸಮಿತಿ ಶಿಫಾರಸ್ಸು ಮಾಡಲಾಗುತ್ತದೆ. ಪ್ರಚಾರ ಕಾರ್ಯಕ್ಕೆ ಕೇಂದ್ರ ನಾಯಕರನ್ನು ಕರೆ ತರುವುದು, ಸ್ಟಾರ್ ಪ್ರಚಾರಕರನ್ನು ನಿಯೋಜಿಸುವ ಕುರಿತಂತೆಯೂ ಚರ್ಚೆಯಾಗಲಿದೆ. ಮಂಡ್ಯದಲ್ಲಿ ಸುಮಲತಾ ಕಣಕ್ಕಿಳಿದರೆ ಬೆಂಬಲಿಸಬೇಕೋ ಬೇಡವೋ ಎಂಬ ಚರ್ಚೆಯ ಜತೆಗೆ ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿ […]

ರಮೇಶ ಜಾರಕಿಹೊಳಿ ನಡೆ ಇನ್ನೂ ನಿಗೂಢ !

ರಮೇಶ ಜಾರಕಿಹೊಳಿ ನಡೆ ಇನ್ನೂ ನಿಗೂಢ !

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ” ಕೈ ” ಅಭ್ಯರ್ಥಿಗಳು ಯಾರು ಎಂಬ ಪ್ರಶ್ನೆ ತೀ್ವ್ರ ಕುತೂಹಲ ಮೂಡಿಸಿದ್ದು, ಮಾಜಿ ಸಚಿವ, ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಅವರ ನಡೆ ನಿಗೂಢವಾಗಿದೆ. ಪಕ್ಷದ ಮುಖಂಡರೊಡನೆ ಮುನಿಸಿಕೊಂಡು ಪಕ್ಷದಿಂದ ಅಂತರ ಕಾದುಕೊಂಡಿರುವ ರಮೇಶ ಜಾರಕಿಹೊಳಿ, ಚುನಾವಣೆಗೆ ಸಂಬಂಧಿಸಿದ ಯಾವ ಪ್ರಕ್ರಿಯೆಗಳಿಗೂ ಸ್ಪಂದಿಸದಿರುವುದು ನಾಯಕರನ್ನು ಗೊಂದಲಕ್ಕೆ ತಳ್ಳಿದೆ. ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆಗೂ ಗೈರು ಹಾಜರಾಗಿರುವ ರಮೇಶ ಅವರ ಮುಂದಿನ ನಡೆ ಏನು […]

‘ಕೈ’ ಅಭ್ಯರ್ಥಿ ಆಯ್ಕೆಗೆ ಇಂದು ವರಿಷ್ಠರ ಜೊತೆ ಸಭೆ: ಸತೀಶ ಜಾರಕಿಹೊಳಿ ಹೇಳಿದ್ದು ಏನು?

‘ಕೈ’ ಅಭ್ಯರ್ಥಿ ಆಯ್ಕೆಗೆ ಇಂದು ವರಿಷ್ಠರ ಜೊತೆ ಸಭೆ: ಸತೀಶ ಜಾರಕಿಹೊಳಿ ಹೇಳಿದ್ದು ಏನು?

ಬೆಳಗಾವಿ: ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಇಂದು ಬೆಂಗಳೂರಿನಲ್ಲಿ  ವರಿಷ್ಠರ್ ಜೊತೆ ಸಭೆ ನಡೆಯಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.  ಇಲ್ಲಿನ್ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ವರಿಷ್ಠರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬೆಳಗಾವಿಯ ಎಲ್ಲ ಮುಖಂಡರು ಸಭೆಗೆ ಹಾಜರಾಗುತ್ತಿದ್ದಾರೆ  ಎಂದು ತಿಳಿಸಿದರು. ಸಭೆಗೆ ರಮೇಶ್ ಜಾರಕಿಹೊಳಿ ಬರುವಂತೆ ಜಿಲ್ಲಾದ್ಯಕ್ಷ ಸೂಚನೆ ನೀಡಿದ್ದಾರೆ. ಶಾಸಕ ರಮೇಶ  ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆ. ಅವರಿಗೆ ವರ್ಚಸ್ಸು […]

ಲೋಕಸಮರ: ಬೆಳಗಾವಿ, ಚಿಕ್ಕೋಡಿ ಸೇರಿ ಉ. ಕರ್ನಾಟಕದಲ್ಲಿ ಏ. 23ರಂದು ಮತದಾನ

ಲೋಕಸಮರ: ಬೆಳಗಾವಿ, ಚಿಕ್ಕೋಡಿ ಸೇರಿ ಉ. ಕರ್ನಾಟಕದಲ್ಲಿ ಏ. 23ರಂದು ಮತದಾನ

  ಹೊಸದಿಲ್ಲಿ: ಲೋಕಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡಯಲಿದೆ.  ಏಪ್ರಿಲ್ 23 ರಂದು ಬೆಳಗಾವಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳು ಸೇರಿದಂತೆ ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಾಗಲಕೋಟೆ, ವಿಜಯಪುರ, ಬಳ್ಳಾರಿ, ರಾಯಚೂರು, ಕಲಬುರಗಿ, ಹಾವೇರಿ, ಬೀದರ, ಧಾರವಾಡ, ಕೊಪ್ಪಳ, ಉ.ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿಯೂ ಏ. 23 ರಂದು ಮತದಾನ ನಡೆಯಲಿದೆ. ಏಪ್ರಿಲ್ 18 ರಂದು ನಡೆಯುವ ಪ್ರಥಮ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮತದಾನ […]

ಗವಿಶ್ರೀಗಳ ನೇತೃತ್ವದಲ್ಲಿ ಮುಂದುವರೆದ ಹಿರೇಹಳ್ಳ ಪುನಶ್ಚೇತನ ಕಾರ್ಯ

ಹಿರೇಹಳ್ಳ, ಕೋಳುರು, ಕಾಟ್ರಳ್ಳಿ, ಭಾಗ್ಯನಗರದ ಸುತ್ತಮುತ್ತ ಸ್ವಚ್ಛತಕಾರ್ಯ ಕೊಪ್ಪಳ : ಹಿರೇಹಳ್ಳದ ಪುನಶ್ಚೇತನ ಕಾರ್ಯವು ದಿನದಿಂದ ದಿನಕ್ಕೆ ಭರದಿಂದ ಸಾಗಿ ಅತ್ಯಂತ ತ್ವರಿತಗತಿಯಾಗಿ ಕೆಲಸಗಳು ಜರುಗುತ್ತಲಿವೆ. ಇಂದು ಹಿರೇಹಳ್ಳ, ಕೋಳುರು, ಕಾಟ್ರಳ್ಳಿ ಹಾಗೂ ಭಾಗ್ಯನಗರದ ಸುತ್ತಮುತ್ತ ಇರುವ ಹಸಿರು ಪಾಚಿ, ಕೆಸರು, ಮುಳ್ಳುಕಂಟಿಗಳು, ಜಾಲಿಮರಗಳು ಹಾಗೂ ಕಸಕಡ್ಡಿಗಳನ್ನು ತೆಗೆದು ಹಾಕಿ ಸ್ವಚ್ಚಗೊಳಿಸುವ ಕಾರ್ಯ ಮುಂದುವರೆದಿದೆ. ಈ ಕಾರ್ಯದಲ್ಲಿ 11 ಇಟ್ಯಾಚಿ, 2 ಜೆ ಸಿ. ಬಿ. 1 ಡೋಜರ್ ಹಾಗೂ 2 ಟ್ರ್ಯಾಕ್ಟರ್ಗಳನ್ನು ಸ್ವಚ್ಛತಾಕಾರ್ಯದಲ್ಲಿ ನಿರಂತರ ಕೆಲಸದಲ್ಲಿದ್ದು, […]