ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ದುರ್ಮರಣ

ಮರಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ದುರ್ಮರಣ

ದಾವಣಗೆರೆ: ಮರುಳು ತುಂಬಿದ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ದಾವಣಗೆರೆ ತಾಲೂಕಿನ ಗಂಗನಕಟ್ಟೆ ಗ್ರಾಮದ ಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ. ಬಸವರಾಜ್(34) ತಪ್ಪೇಶ(27) ಮೃತ ದುರ್ದೈವಿಗಳು. ಕೆರೆಯಲ್ಲಿನ ಮರಳು ತುಂಬಿಕೊಂಡು ತೆರಳುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.  ಈ ವೇಳೆ ಇಬ್ಬರು ಮರಳಿನ ಕೆಳಗೆ ಸಿಲುಕಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಬಳಿಕ ಚಾಲಕ ಎಂಜಿನ್ ಸಮೇತ ಪರಾರಿಯಾಗಿದ್ದಾನೆ.  ಸ್ಥಳಕ್ಕೆ ಮಾಯಕೊಂಡ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ […]

ಅಥಣಿ: ಸೊಸೆ ಮೇಲೆ ಎರಗಿ ಅಟ್ಟಹಾಸ ಮರೆದ ಕಾಮುಕ ಮಾವ

ಅಥಣಿ: ಸೊಸೆ ಮೇಲೆ ಎರಗಿ ಅಟ್ಟಹಾಸ ಮರೆದ ಕಾಮುಕ ಮಾವ

ಅಥಣಿ: ಮಾವನಿಂದ ಸೊಸೆ ಮೇಲೆ ಅತ್ಯಾಚಾರ ಎಸಗಿದ ಅಮಾನುಷ ಘಟನೆಯೊಂದು ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅರ್ಜುನ ಪಡಸಲಗಿ(50) ಅತ್ಯಾಚಾರ ಎಸಗಿದ ಆರೋಪಿ. ಈತ ಕಳೆದ ಬುಧವಾರ ಮನೆಯಲ್ಲಿ ಯಾರು ಇಲ್ಲದಾಗ ತನ್ನ 21 ವರ್ಷದ ಸೊಸೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಈ ಸಂಬಂಧ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಬಸವನ ಬಾಗೇವಾಡಿ ಪೊಲೀಸರು ಪ್ರಕರಣವನ್ನು ಅಥಣಿ ಪೊಲೀಸ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಅಥಣಿ ಪೊಲೀಸರು […]

ಕುಷ್ಟಗಿಯಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ: ಬಿಜೆಪಿ, ಜೆಡಿಎಸ್ ವಿರುದ್ದ ಹರಿಹಾಯ್ದ ಸಿಎಂ

ಕುಷ್ಟಗಿಯಲ್ಲಿ ಮೊಳಗಿದ ಕಾಂಗ್ರೆಸ್ ಕಹಳೆ: ಬಿಜೆಪಿ, ಜೆಡಿಎಸ್ ವಿರುದ್ದ ಹರಿಹಾಯ್ದ ಸಿಎಂ

   ಜೈಲಿಗೆ ಹೋಗಿ ಬಂದ ಬಿಜೆಪಿಯವರಿಂದ ಜನಪರಿರ್ತನೆ ಹೇಗೆ ಸಾಧ್ಯ: ಸಿದ್ದರಾಮಯ್ಯ ಬಿಜೆಪಿ ಯವರು ಬಣ್ಣ ಬದಲಾಯಿಸೋ ಉಸರವಳ್ಳಿ ಇದ್ದಂಗ  ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಬದಲು ಸಿಎಂ ಸ್ಥಾನ ನೀಡಲಿ: ಜೆಡಿಎಸ್ ವಿರುದ್ದ ವಾಗ್ದಾಳಿ ಕೊಪ್ಪಳ : ರಾಜ್ಯ ದಲ್ಲಿ ಚುನಾವಣಾ ಪ್ರಚಾರದ  ಪರ್ವ ಈಗಾಗಲೇ ಆರಂಭವಾಗಿದೆ. ಕಾಂಗ್ರೆಸ್ ,ಬಿಜೆಪಿ, ಜೆಡಿಎಸ್ ಪಕ್ಷ ಗಳು ಯಾತ್ರೆ ಮೂಲಕ ಕಾರ್ಯಕರ್ತರ ಸಮಾವೇಶ ಮಾಡ್ತೀವೆ. ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಜೊತೆಗೆ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರ ಬೃಹತ್ […]

ಹುಬ್ಬಳ್ಳಿ ಎಸಿಪಿ ದಾವೂದ್ ಖಾನ್ ಎತ್ತಂಗಡಿ…!

ಹುಬ್ಬಳ್ಳಿ ಎಸಿಪಿ ದಾವೂದ್ ಖಾನ್ ಎತ್ತಂಗಡಿ…!

ಹುಬ್ಬಳ್ಳಿ: ನಗರದಲ್ಲಿ ಈದ್ ಮಿಲಾದ್ ಹಬ್ಬದ ದಿನ ಮೌಲ್ವಿಯ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿ ದಾವೂದ್ ಖಾನ್ ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ. ಈದ್ ಮಿಲಾದ್ ದಿನ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತಿದೆ.‌,ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂಬ ದೇಶದ್ರೋಹದ ಹೇಳಿಕೆ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ಎಸಿಪಿ ದಾವೂದ್ ಖಾನ್ ಕೂಡ ಭಾಗವಹಿಸಿದ್ದರು. ತಮ್ಮ  ಕಣ್ಣೆದುರೇ […]

ಸಾಲಭಾದೆ: ಕ್ರಿಮಿನಾಶಕ ಸೇವಿಸಿ ರೈತ ಸಾವು

ಸಾಲಭಾದೆ: ಕ್ರಿಮಿನಾಶಕ ಸೇವಿಸಿ ರೈತ ಸಾವು

ಕಿತ್ತೂರು: ಸಾಲ ಭಾದೆ ತಾಳಲಾರದೆ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕರೆಪ್ಪ ಬಸಪ್ಪ ಪಟ್ಡಿಹಾಳ(48) ಆತ್ಮಹತ್ಯೆ ಮಾಡಿಕೊಂಡ ರೈತ.  ಕಳೆದ ವರ್ಷ ಕೊಳವೆ ಬಾವಿ ಕೊರೆಸಿದ್ದ, ಬೆಳೆ ನಾಶ ಹಾಗೂ ಸಾಲ ಭಾದೆಯಿಂದ ಮನನೊಂದು ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆಯ ಪಿ.ಎಸ್‌.ಐ ಮಲ್ಲಿಕಾರ್ಜುನ ಕುಲಕರ್ಣಿ ಭೇಟಿ ಪರಿಶೀಲನೆ ನಡೆಸಿದ್ದು,  ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 115

ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇಡಿನ ರಾಜಕಾರಣ ಸಲ್ಲದು: ಯಡಿಯೂರಪ್ಪ ವಾಗ್ದಾಳಿ

ಮುಖ್ಯಮಂತ್ರಿ  ಸಿದ್ಧರಾಮಯ್ಯ ಸೇಡಿನ ರಾಜಕಾರಣ ಸಲ್ಲದು: ಯಡಿಯೂರಪ್ಪ ವಾಗ್ದಾಳಿ

ಕಲಬುರಗಿ: ಜಿಲ್ಲೆಯ ಎಲ್ಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮಿಷನ್ 150 ಪ್ಲಸ್‍ಗೆ ಕೈಜೋಡಿಸಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಕಮಲಾಪುರ ಕ್ಷೇತ್ರದ ರಾಂಪೂರೆ ಮೈದಾನದಲ್ಲಿ ಸೋಮವಾರ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕನಸಿನ ಡಿಜಿಟಲ್ ಇಂಡಿಯಾಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಚಹಾ ಮಾಡುವ ಮೋದಿ ಪ್ರಧಾನಿಯಾಗಿರುವುದು, ಹಿಂದುಳಿದ ವರ್ಗದ ರಾಮನಾಥ ಕೋವಿಂದ ರಾಷ್ಟ್ರಪತಿಯಾಗಿರುವುದು, ವೆಂಕಯ್ಯ ನಾಯ್ಡು ಉಪರಾಷ್ಟ್ರಪತೊಯಾಗಿರುವುದು […]

ಸುಳ್ಳು ಆದಾಯ,ಜಾತಿ ಪ್ರಮಾಣಪತ್ರ ಪ್ರಕರಣ: ಬಳ್ಳಾರಿ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಕುತ್ತು

ಧಾರವಾಡ: ಬಳ್ಳಾರಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾರತಿ ತಿಮ್ಮಾರಡ್ಡಿ ಅವರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿ ಸಿದ್ದಪ್ಪ ಎನ್ನುವವರು ಸೇರಿದಂತೆ ಇಲ್ಲಿನ ಹೈಕೋರ್ಟ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಈ ಪ್ರಕರಣ ಸುಪ್ರೀಂ ಕೋರ್ಟವರೆಗೂ ಹೋಗಿತ್ತು. ಪ್ರಕರಣವನ್ನು ಹೈಕೋರ್ಟ ನಲ್ಲೇ ಬಗೆಹರಿಸುವಂತೆ ಸೂಚನೆ ನೀಡಿತ್ತು. ಅದರನ್ವಯ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ ಏಕಸದಸ್ಯ ಪೀಠ ಭಾರತಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸುವಂತೆ […]

ಚಿಕ್ಕೋಡಿ ಕೆಎಲ್ ಇ ಆಸ್ಪತ್ರೆಗೆ ಪ್ರಥಮ ವಾರ್ಷಿಕೋತ್ಸವ: ಡಿ. 6 ರಂದು ಬೃಹತ್ ಆರೋಗ್ಯ ಶಿಬಿರ

ಚಿಕ್ಕೋಡಿ ಕೆಎಲ್ ಇ ಆಸ್ಪತ್ರೆಗೆ ಪ್ರಥಮ ವಾರ್ಷಿಕೋತ್ಸವ: ಡಿ. 6 ರಂದು ಬೃಹತ್ ಆರೋಗ್ಯ ಶಿಬಿರ

ಚಿಕ್ಕೋಡಿ: ಗ್ರಾಮೀಣ ಭಾಗದ ಜನರ ಆರೋಗ್ಯದ ಜವಾಬ್ದಾರಿ ಹೊತ್ತು ಚಿಕ್ಕೋಡಿಯಲ್ಲಿ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಆರಂಭಗೊಂಡು ಒಂದು ವರ್ಷವಾಗಿದ್ದು, ಡಿ. 6 ರಂದು  ಪ್ರಥಮ ವಾರ್ಷಿಕೋತ್ಸವ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನುಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು. ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ರವಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‍ಇ ವಿಶ್ವ ವಿದ್ಯಾಲಯ, ಜವಾಹರಲಾಲ ನೇಹರು ವೈದ್ಯಕೀಯ ಮಹಾವಿದ್ಯಾಲಯ, ಡಾ. ಪ್ರಭಾಕರ […]

ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶ ಭಾರತ: ಶಾಸಕ ಬಾಲಚಂದ್ರ ಜಾರಕಿಹೊಳಿ

ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶ ಭಾರತ: ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ. ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿರುವುದು ಏಕತೆಯ ಸಂಕೇತವಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಸಮೀಪದ ಪಟಗುಂದಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಪಟಗುಂದಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಪರ ಕೆಲಸಗಳನ್ನು ಜಾರಿಗೊಳಿಸಿದ್ದು, ಪಟಗುಂದಿ ಕ್ರಾಸದಿಂದ ಕಮಲದಿನ್ನಿವರೆಗಿನ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಂದಿದೆ. ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 23 ಲಕ್ಷ ರೂ, […]

ಡಿ 11 ಕ್ಕೆ ಶಹಾಪುರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

ಶಹಾಪುರ: ಡಿಸೆಂಬರ್‌ 11 ರಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ರಾಜ್ಯ ಬಿಜೆಪಿ ವತಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರಾದ ಗುರು ಪಾಟೀಲ್ ಶಿರವಾಳ ಹೇಳಿದರು. ನಗರಕ್ಕೆ ಪರಿವರ್ತನಾ ರ್ಯಾಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕರೆದ ಪೂರ್ವ ಭಾವಿ ಸಭೆಯಲ್ಲಿ ಭಿತ್ತಿಚಿತ್ರ ಹಾಗೂ ಸರಕಾರ ಸಾಧನೆಗಳ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಡಿಸೆಂಬರ್ 11 ರಂದು ಬೆಳಿಗ್ಗೆ ಶಹಾಪುರ ಹಳೆ ಬಸ್ ನಿಲ್ದಾಣದ ಎದುರುಗಡೆ ಇರುವ ಸಿಪಿಎಸ್ ಶಾಲಾ ಮೈದಾನದಲ್ಲಿ ಬೃಹತ್ ಪರಿವರ್ತನಾ ಯಾತ್ರೆ […]

1 68 69 70 71 72 103