ಮೂಡಲಗಿ ತಾಲೂಕು ಕೇಂದ್ರಕ್ಕಾಗಿ 2ನೇ ದಿನಕ್ಕೆ ಕಾಲಿರಿಸಿದ ಹೋರಾಟ: ತಾಳ್ಮೆ ಪರೀಕ್ಷಿಸದಂತೆ ಹೋರಾಟಗಾರರು ಎಚ್ಚರಿಕೆ

ಮೂಡಲಗಿ ತಾಲೂಕು ಕೇಂದ್ರಕ್ಕಾಗಿ 2ನೇ ದಿನಕ್ಕೆ ಕಾಲಿರಿಸಿದ ಹೋರಾಟ: ತಾಳ್ಮೆ ಪರೀಕ್ಷಿಸದಂತೆ ಹೋರಾಟಗಾರರು ಎಚ್ಚರಿಕೆ

ಮೂಡಲಗಿ: ಗೋಕಾಕ ತಾಲೂಕಿನ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಿ ಅಧಿಕೃತವಾಗಿ ಘೋಷಣೆ ಮಾಡಿದ್ದರು ಏಕಾಏಕಿ ಸರ್ಕಾರ ಮೂಡಲಗಿ ತಾಲೂಕು ರಚನೆ ಕೈಬಿಟ್ಟಿರುವುದರಿಂದ ನಾಗರೀಕರು, ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿರಿಸಿದೆ. ಇಲ್ಲಿನ  ನಗರದ ಕಲ್ಮೇಶ್ವರ ವೃತ್ತದಲ್ಲಿ ಮೂಡಲಗಿ ತಾಲೂಕಾ ಪುನರ್ ರಚನಾ ವೇದಿಕೆ, ವಿವಿಧ ಸಂಘಟನೆಗಲು ಶನಿವಾರ ಕೂಡ ಪ್ರತಿಭಟನೆಯನ್ನು ಮುಂದುವರಿಸಿದವು. ಈ ವೇಳೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಮೂಡಲಗಿ ಪಟ್ಟಣದಲ್ಲಿ ಸುಮಾರು 90 ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿವೆ ಮೂಡಲಗಿ ತಾಲೂಕು ಕೇಂದ್ರವನ್ನಾಗಿಸಿ […]

ಸೆ. 11 ರಂದು ಶಾಸಕ ಸತೀಶ ಜಾರಕಿಹೊಳಿ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಸೆ. 11 ರಂದು ಶಾಸಕ ಸತೀಶ ಜಾರಕಿಹೊಳಿ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ: ಯಮಕನಮರಡಿ ಮತಕ್ಷೇತ್ರವನ್ನು ಸರ್ವಾಂಗೀಣ ಪ್ರಗತಿಯತ್ತ ಮುನ್ನಡೆಸುತ್ತಿರುವ ಅಭಿವೃದ್ದಿ ಹರಿಕಾರ ಎ.ಆಯ್ ಸಿ.ಸಿ ಕಾರ್ಯದರ್ಶಿ ಶಾಸಕ ಸತೀಶ ಜಾರಕಿಹೊಳಿಯವರು ಸೋಮವಾರ ದಿ 11 ರಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಯಮಕನಮರಡಿ ಕಾಂಗ್ರೇಸ ಘಟಕದ ಅಧ್ಯಕ್ಷ ವೀರಣ್ಣಾ ಬಿಸಿರೊಟ್ಟಿ ಹೇಳಿದರು. ಅವರು 9 ರಂದು ಯಮಕನಮರಡಿ ಕಾಂಗ್ರೇಸ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಆನಂದಪೂರ ಗ್ರಾಮದಲ್ಲಿ ಸಿ.ಎಮ್ ಜಿ.ಎಸ್ ವಾಯ್ ಯೋಜನೆಯಲ್ಲಿ ಮಂಜೂರಾದ 40 ಲಕ್ಷ ರೂಗಳ ರಸ್ತೆ ಸುಧಾರಣೆ ,6.75 ಲಕ್ಷಗಳ […]

ಅನೈತಿಕ ಸಂಬಂಧ: ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆ, ದಂಪತಿ ಬಂಧನ

ಅನೈತಿಕ ಸಂಬಂಧ:  ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆ, ದಂಪತಿ ಬಂಧನ

ಬೆಂಗಳೂರು: ಪತ್ನಿಯನ್ನು ಅನೈತಿಕ ಸಂಬಂಧಕ್ಕೆ ಪೀಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪತಿ ಮತ್ತು  ಪತ್ನಿ ಇಬ್ಬರು ಸೇರಿ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಸೆ. 6ರಂದು ವ್ಯಕ್ತಿಯನ್ನು ಕೊಲೆ ಮಾಡಿ  ನಿರ್ಜನ ಪ್ರದೇಶದಲ್ಲಿ ಬೀಸಾಡಿದ್ದರು. ಈ ಸಂಬಂಧ ಮಹದೇವಪುರ ಪೊಲೀಸರು ತನಿಖೆ ನಡೆಸಿ ಒಂದೇ ಗಂಟೆಯಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನರಸಿಂಹಲು ಆತನ ಪತ್ನಿ ಕಲ್ಯಾಣಿ ಬಂಧಿತರು.  ಮೃತನನ್ನು ಆಂಧ್ರ ಮೂಲದ ಚಂದ್ರ ಎಂದು ಗುರುತಿಸಲಾಗಿದೆ. ಕಲ್ಯಾಣಿ ಹಾಗೂ ಚಂದ್ರನೊಂದಿಗೆ ಅಕ್ರಮ ಸಂಬಂಧವಿತ್ತು. ಈ ವಿಷಯ ಪತಿ […]

ಪೊಲೀಸರ ಮೇಲೆ ದರ್ಪ ಮೆರೆದಿದ್ದ ಬಿಜೆಪಿ ಸಂಸದ ನಳಿನಕುಮಾರ್ ಕಟೀಲ್ ವಿರುದ್ಧ ಕೇಸ್

ಪೊಲೀಸರ ಮೇಲೆ ದರ್ಪ ಮೆರೆದಿದ್ದ ಬಿಜೆಪಿ ಸಂಸದ ನಳಿನಕುಮಾರ್ ಕಟೀಲ್ ವಿರುದ್ಧ ಕೇಸ್

ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ. ಬಿಜೆಪಿ ಯುವಮೋರ್ಚಾ ಮಂಗಳೂರು ಚಲೊ ಸಂದರ್ಭದಲ್ಲಿ ಪೊಲೀಸರು ಕದ್ರಿ ಗೋರಕ್ಷನಾಥ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಕೂಡಿ ಹಾಕಿದ್ದರು. ಕೇಸ್ ಬುಕ್ ಮಾಡುವ ನೆಪದಲ್ಲಿ ಕೂಡಿ ಹಾಕಿ, ಬಿಡುಗಡೆ ಮಾಡಲು ತಡಮಾಡಿದ್ದಕ್ಕೆ ಆಕ್ರೋಶಗೊಂಡ ಸಂಸದರು ಸ್ಥಳಕ್ಕೆ ತೆರಳಿ ಕದ್ರಿ ಇನ್ ಸ್ಪೆಕ್ಟರ್ ಮಾರುತಿ ನಾಯಕ್ ಗೆ ಅವಾಜ್ ಹಾಕಿದ್ದರು. ಈ ವಿಡಿಯೋ […]

ಕೊಳೆಗೇರಿಗಳ ಮನೆಗಳಿಗೆ ತೆರಳಿ ಮನವೊಲಿಸಿ ಸಾಕ್ಷರರನ್ನಾಗಿಸಿ : ಅನಿತಾಬಾಯಿ

ಕೊಳೆಗೇರಿಗಳ ಮನೆಗಳಿಗೆ ತೆರಳಿ ಮನವೊಲಿಸಿ ಸಾಕ್ಷರರನ್ನಾಗಿಸಿ : ಅನಿತಾಬಾಯಿ

51 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ದಾವಣಗೆರೆ: ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಾಕ್ಷರತೆ ಅತ್ಯಗತ್ಯವಾಗಿದ್ದು, ನಗರದ ಹಿಂದುಳಿದ ಕಾಲೋನಿಗಳು, ಕೊಳೆಗೇರಿಗಳ ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಸಾಕ್ಷರರನ್ನಾಗಿ ಮಾಡಬೇಕೆಂದು ಮೇಯರ್ ಅನಿತಾಬಾಯಿ ಮಾಲತೇಶ್ ಸಲಹೆ ನೀಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ   ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಾಕ್ಷರತಾ ಸಮಿತಿ ಹಾಗೂ ಜನ ಶಿಕ್ಷಣ ಸಂಸ್ಥಾನ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 51 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ, ಸಾಕ್ಷರಾ ಸಪ್ತಾಹ ಹಾಗೂ ವಿಚಾರ ಸಂಕಿರಣ […]

ಕೊಪ್ಪಳ: 200 ಗಂಟೆಗಳಲ್ಲಿ ಇಪ್ಪತ್ತು ಸಾವಿರ ಶೌಚಾಲಯ ಕಟ್ಟಿಸುವ ಅಭಿಯಾನ

ಕೊಪ್ಪಳ ಜಿಲ್ಲೆಯಲ್ಲಿ ಮಿಷನ್ 200- ಅಭಿಯಾನಕ್ಕೆ ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಚಾಲನೆ ಕೊಪ್ಪಳ : ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೌಚಾಲಯ ಜಾಗೃತಿಗೆ ಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಮಿಷನ್-200, ಎರಡುನೂರು ಗಂಟೆಯ ಅವಧಿಯಲ್ಲಿ 20 ಸಾವಿರ ಶೌಚಾಲಯಗಳನ್ನು ಕಟ್ಟಿಸುವ ನೂತನ ದಾಖಲೆಯನ್ನು ಕೊಪ್ಪಳ ಜಿಲ್ಲೆ ನಿರ್ಮಿಸಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ್ ಅವರು ಹೇಳಿದರು. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಸೆ. 08 […]

ಗೌರಿ ಲಂಕೇಶ ಹತ್ಯೆ ಆರೋಪಿಗಳ ಬಂಧನಕ್ಕೆ ಕರವೇ ಮಹಿಳಾ ಘಟಕದಿಂದ ಪ್ರತಿಭಟನೆ

ಗೌರಿ ಲಂಕೇಶ ಹತ್ಯೆ ಆರೋಪಿಗಳ ಬಂಧನಕ್ಕೆ ಕರವೇ ಮಹಿಳಾ ಘಟಕದಿಂದ ಪ್ರತಿಭಟನೆ

ದಾವಣಗೆರೆ: ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ, ಜಿಲ್ಲಾ ಮಹಿಳಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಜಯದೇವ ವೃತ್ತದಲ್ಲಿ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಮಹಿಳಾ ಅಧ್ಯಕ್ಷೆ ಜ್ಯೋತಿ ವಿನಾಯಕ್ ಮಾತನಾಡಿ, ಗೌರಿ ಲಂಕೇಶ್ ಕೇವಲ ಪತ್ರಕರ್ತೆಯಾಗಿರದೇ ಮಹಿಳಾ ಪರ ಹೋರಾಟಗಾರ್ತಿ, […]

ಬೀಳಗಿ: ಕಟ್ಟಡ ನಿರ್ಮಾಣಕ್ಕಾಗಿ ತೆಗೆದಿದ್ದ ತೆಗ್ಗಿನಲ್ಲಿ ಬಿದ್ದು ಬಾಲಕ ಸಾವು

ಬೀಳಗಿ: ಕಟ್ಟಡ ನಿರ್ಮಾಣಕ್ಕಾಗಿ ತೆಗೆದಿದ್ದ ತೆಗ್ಗಿನಲ್ಲಿ ಬಿದ್ದು ಬಾಲಕ ಸಾವು

ಬೀಳಗಿ: ತಾಲೂಕಿನ ನಾಗರಾಳ ಗ್ರಾಮದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ನಿರ್ಮಿಸುತ್ತಿರುವ ಕಾಲಂದ ತೆಗ್ಗಿನಲ್ಲಿ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ. ಚೇತನ ಚಂದ್ರಪ್ಪ ಮಾದರ(7) ಸಾವನ್ನಪ್ಪಿದ ಬಾಲಕ, ನಾಗರಾಳ ಗ್ರಾಮದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಕಾಲಂ ನಿರ್ಮಿಸುವುದಕ್ಕೆ ತೆಗ್ಗನ್ನು ತೆಗೆಯಲಾಗಿದೆ, ಅಂದು ಗ್ರಾಮದಲ್ಲಿ ರಭಸದ ಮಳೆಯಾಗಿದ್ದು ಮಳೆಯಾಗಿದ್ದರಿಂದ ಕಾಲಂ ನಿರ್ಮಾಣಕ್ಕೆ ತೆಗೆದ ತೆಗ್ಗಿನಲ್ಲಿ ನೀರು ತುಂಬಿ ಕಾಲಂ ಪಕ್ಕದಲ್ಲಿ ಜತೆಗೆ ದಾರಿಯುದ್ದಕ್ಕೂ ಸಮನಾಗಿ ನೀರು ತುಂಬಿ ಹರಿಯಲಾಗುತ್ತಿದೆ, ನೀರು ಸಮಪಾತಳಿಯಿಂದ ಹರಿಯುತ್ತಿರುವುದರಿಂದ ಇಲ್ಲಿ ತೆಗ್ಗು ಇದೇ ಎಂಬುವುದು ಕಾಣಿಸಿಕೊಂಡಿಲ್ಲ, ಆದ್ದರಿಂದ […]

ಧಾರವಾಡ: ತಾಲೂಕಾಮಟ್ಟದ ಕ್ರೀಡಾಕೂಡಕ್ಕೆ ಸಚಿವರಿಂದ ಚಾಲನೆ

ಧಾರವಾಡ: ತಾಲೂಕಾಮಟ್ಟದ ಕ್ರೀಡಾಕೂಡಕ್ಕೆ ಸಚಿವರಿಂದ ಚಾಲನೆ

ಧಾರವಾಡ: ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮರಾಠಾ ವಿದ್ಯಾಪ್ರಸಾರಕ ಮಂಡಳಿ, ಭಾರತ ಪ್ರೌಢಶಾಲೆ ಹಾಗೂ ಜೀಜಾಮಾತಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ 2017-18ನೇ ಸಾಲಿನ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ದೈಹಿಕ ಹಾಗೂ ಮಾನಸಿಕ ಕ್ಷಮತೆ […]

ಧಾರವಾಡ: ಸಚಿವರ ಮನೆ ಎದುರು ಪಾಲಿಕೆಯ ಬಿಜೆಪಿ ಸದಸ್ಯರಿಂದ ಪ್ರತಿಭಟನೆ

ಧಾರವಾಡ: ಸಚಿವರ ಮನೆ ಎದುರು ಪಾಲಿಕೆಯ ಬಿಜೆಪಿ ಸದಸ್ಯರಿಂದ ಪ್ರತಿಭಟನೆ

ಧಾರವಾಡ: ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಬಾರಾಕೊಟ್ರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಮನೆ ಮುಂದೆ ಪಾಲಿಕೆಯ ಬಿಜೆಪಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಪಾಲಿಕೆಗೆ ಬರಬೇಕಿರುವ ಪಿಂಚಣಿ ಹಣ ನೀಡದೇ ವಂಚಿಸುತ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೂ ಅವರು ಹಣ ಬಿಡುಗಡೆಗೆ ಆಸಕ್ತಿ ತೋರುತ್ತಿಲ್ಲ ಎಂದು ಪ್ರತಿಭಟನಾಕಾರರು […]

1 70 71 72 73 74 91