ಬಸವಾದಿ ಶರಣರ ಸಮಾಧಿ ಸ್ಥಳಗಳ ಅಭಿವೃದ್ದಿಗೊಳಿಸಿ: ಬಸವ ಸೇನೆ ಆಗ್ರಹ

ಬಸವಾದಿ ಶರಣರ ಸಮಾಧಿ ಸ್ಥಳಗಳ ಅಭಿವೃದ್ದಿಗೊಳಿಸಿ: ಬಸವ ಸೇನೆ ಆಗ್ರಹ

ಶರಣರ ಸಮಾಧಿಗಳಿರುವ ಗ್ರಾಮ  ಆದರ್ಶ ಗ್ರಾಮ ಘೋಷಣೆ  ಶಶಿಧರ್ ಕುರೇರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಬೆಳಗಾವಿ: ಬಸವಾದಿ ಶರಣರ ಸಮಾಧಿಗಳಿರುವ ಗ್ರಾಮಗಳನ್ನು ಆದರ್ಶ ಗ್ರಾಮಗಳು ಎಂದು ಘೋಷಿಸಬೇಕು ಹಾಗೂ ಆ ಗ್ರಾಮಗಳು ಮತ್ತು ಸಮಾಧಿ ಸ್ಥಳಗಳ ಅಭಿವೃದ್ದಿಗೆ ಬಜೆಟ್‍ನಲ್ಲಿ ವಿಶೇಷ ಅನುದಾನ ನೀಡುವಂತೆ ಬಸವ ಭೀಮ ಸೇನೆ ಆಗ್ರಹಿಸಿದೆ. ಬಸವ ಸೇನೆ ಅಧ್ಯಕ್ಷ ಆರ್.ಎಸ್.ದರ್ಗೆ ಅವರ ನೇತೃತ್ವದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಶ್ವಗುರು ಬಸವಣ್ಣನವರು, […]

ಉ.ಕ ಅಭಿವೃದ್ದಿಗಾಗಿ ಪ್ರತ್ಯೇಕ ಡಿಸಿಎಂ ನೇಮಿಸಿ: ಸರಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯ

ಉ.ಕ ಅಭಿವೃದ್ದಿಗಾಗಿ ಪ್ರತ್ಯೇಕ ಡಿಸಿಎಂ ನೇಮಿಸಿ: ಸರಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯ

ಉದಯನಾಡು ಸುದ್ದಿ, ಬೆಳಗಾವಿ:  ಉತ್ತರ ಕರ್ನಾಟಕ ಅಭಿವೃದ್ದಿಗಾಗಿ ಪ್ರತ್ಯೇಕ ಡಿಸಿಎಂ ನೇಮಕ ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಕನ್ನಡಪರ ಹೋರಾಟಗಾರರೊಂದಿಗೆ ಇಲ್ಲಿನ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಿದ ಮಾತನಾಡಿದ ಅವರು,  ಉತ್ತರ ಕರ್ನಾಟಕಕ್ಕೆ ನಿರತಂತವಾಗಿ  ಅನ್ಯಾಯವಾಗುತ್ತಿದ್ದು, ಸದನದಲ್ಲಿ ಸಮಗ್ರವಾಗಿ ಚರ್ಚೆ ನಡೆಯಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಯಾವುದೇ ಸಚಿವರು ಕೂಡ ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸುವರ್ಣಸೌಧದೊಳಗೆ ಪ್ರವೇಶಿಸಲೆತ್ನಿಸಿದ ವಾಟಾಳ್ ನಾಗರಾಜ್ ರನ್ನು […]

ಶಾಂತಿಯ ತೋಟವನ್ನಾಗಿ ನಾಡು ರೂಪಿಸಲು ಶ್ರಮಿಸೋಣ: ಸಚಿವ ರಮೇಶ ಜಾರಕಿಹೊಳಿ ಕರೆ

ಶಾಂತಿಯ ತೋಟವನ್ನಾಗಿ ನಾಡು ರೂಪಿಸಲು ಶ್ರಮಿಸೋಣ: ಸಚಿವ ರಮೇಶ ಜಾರಕಿಹೊಳಿ ಕರೆ

ಬೆಳಗಾವಿಯಲ್ಲಿ ಸಂಭ್ರಮದ ರಾಜ್ಯೋತ್ಸವ; ಮನಸೆಳೆದ ಮೆರವಣಿಗೆ,ಕನ್ನಡದ ಕಂಪು ಬೀರಿದ ರಾಜ್ಯೋತ್ಸವ ಬೆಳಗಾವಿ: ಕನ್ನಡಿಗರು ಭೌಗೋಳಿಕವಾಗಿ ಒಗ್ಗೂಡಿದ ಸುವರ್ಣ ಗಳಿಗೆಯಾಗಿರುವ ಈ ದಿನ ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ನಗರದ ಸಿಪಿಎಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮೇಶ ಜಾರಕಿಹೊಳಿ ಅವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಕರ್ನಾಟಕ ರಾಜ್ಯೋತ್ಸವ ಸಂದೇಶ ನೀಡಿದ ಸಚಿವ ರಮೇಶ ಜಾರಕೊಹೊಳಿ, “ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿರುವಂತೆ […]

ಇಂದು ಸಂವಿಧಾನ ನಾಳೆ ಬಸವ ತತ್ವ ಸುಟ್ಟರು ಆಶ್ಚರ್ಯ ಪಡಬೇಕಿಲ್ಲ: ಪ್ರೊ. ಯಲ್ಲಪ್ಪ ಹಿಮ್ಮಡಿ

ಇಂದು ಸಂವಿಧಾನ ನಾಳೆ ಬಸವ ತತ್ವ ಸುಟ್ಟರು ಆಶ್ಚರ್ಯ ಪಡಬೇಕಿಲ್ಲ: ಪ್ರೊ. ಯಲ್ಲಪ್ಪ ಹಿಮ್ಮಡಿ

ಬೆಳಗಾವಿ: ಸದ್ಯದ ಪರಿಸ್ಥಿತಿಯಲ್ಲಿ ಸಂವಿಧಾನ ಅಪಾಯ ಅಂಚಿನಲ್ಲಿದ್ದು,  ಇಂದು ಸಂವಿಧಾನವನ್ನು ಸುಡುತ್ತಿರುವ ಮನುಸ್ಮೃತಿ ಮನಸ್ಸುಗಳು ನಾಳೆ ಬಸವ ತತ್ವಗಳನ್ನು ಸುಟ್ಟರು ಆಶ್ಚರ್ಯ ಪಡಬೇಕಿಲ್ಲ. ಸಂವಿಧಾನ ಉಳುವಿಗಾಗಿ, ಬಸವ ತತ್ವ ಉಳುವಿಗಾಗಿ ನಾವು ಜಾಗೃತರಾಗಬೇಕಿದೆ ಎಂದು ಬಂಡಾಯ ಸಾಹಿತ್ಯ ಸಂಘಟನೆ  ರಾಜ್ಯ ಸಂಚಾಲಕ, ಪ್ರೊ. ಯಲ್ಲಪ್ಪ ಹಿಮ್ಮಡಿ ಹೇಳಿದರು. ಇಲ್ಲಿನ ಕುಮಾರ ಗಂಧರ್ವರಂಗ ಮಂದಿರಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಸವ ಪಂಚಮಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಮಾನವ […]

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ: ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷಕ್ಕೆ  ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ: ಪ್ರಧಾನಿ ಮೋದಿ

ಬೆಳಗಾವಿ:  ಕಾಂಗ್ರೆಸ್ ಪಕ್ಷಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು,  ಸಾವಿರಾರು ಸಂಖ್ಯೆಯಲ್ಲಿ ನಕಲಿ ಐಟಿ ಕಾರ್ಡಗಳು ದೊರೆತಿವೆ.  ಇವರಿಗೆ ನಕಲಿ ಕಾರ್ಡಿನ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ ಅವರು,  ಕಾಂಗ್ರೆಸ್ ನವರು ಎಷ್ಟು ನಕಲಿ ಐಟಿ ಕಾರ್ಡ ಸೃಷ್ಟಿಸಿರಬಹುದು, ಇದಕ್ಕಾಗಿ ಎಲ್ಲರು ಜಾಗೃತರಾಗಿ ಎಂದರು. ಕಾಂಗ್ರೆಸ್ ಮಂತ್ರಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿವೆ.  […]

ವಯಸ್ಸಾದ ಬಿಎಸ್ ವೈ ಏಕೆ ಸಿಎಂ ಅಭ್ಯರ್ಥಿ?: ಸ್ಮೃತಿ ಇರಾನಿಯತ್ತ ತೂರಿ ಬಂದ ಪ್ರಶ್ನೆ!

ವಯಸ್ಸಾದ ಬಿಎಸ್ ವೈ ಏಕೆ ಸಿಎಂ ಅಭ್ಯರ್ಥಿ?: ಸ್ಮೃತಿ ಇರಾನಿಯತ್ತ ತೂರಿ ಬಂದ ಪ್ರಶ್ನೆ!

ಬೆಳಗಾವಿ: ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನ ಬೆಂಬಲಿಸುತ್ತದೆ. ಆದರೆ ಬಿಜೆಪಿಯಲ್ಲಿ ಯಾಕೆ ವಯಸ್ಸಾದ ಯಡಿಯೂರಪ್ಪಗೆ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೀರಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಯುವತಿಯೊಬ್ಬಳು ಪ್ರಶ್ನೆ ಎಸೆದಿದ್ದಾಳೆ. ಇಲ್ಲಿನ ಕೆಎಲ್ ಇ ಜೀರಗೆ ಸಭಾಂಗಣದಲ್ಲಿ ಶನಿವಾರ ನಡೆದ ಕರುನಾಡ ಜಾಗೃತಿ ಮಹಿಳಾ ಸಂವಾದದಲ್ಲಿ ಯುವತಿ ಪ್ರಶ್ನೆ ಎಸೆದಿದ್ದಾಳೆ. ಯುವತಿಯ ಪ್ರಶ್ನೆಗೆ ತಬ್ಬಿಬ್ಬಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸ್ವಲ್ಪ ಹೊತ್ತು ಸುಧಾರಿಕೊಂಡು ಉತ್ತರಿಸಿದ್ದು, ಸಿಎಂ ಸ್ಥಾನಕ್ಕೆ ಅನುಭವ ಮುಖ್ಯ. ಈ ಹಿಂದೆ […]

ಬಿಜೆಪಿಯವರು ಭ್ರಷ್ಟಾಚಾರ ಮಾಡಿ ಜೈಲಿಗೆ ಬೀಗತನಕ್ಕೆ ಹೋಗಿದ್ದರಾ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಭ್ರಷ್ಟಾಚಾರ ಮಾಡಿ ಜೈಲಿಗೆ ಬೀಗತನಕ್ಕೆ ಹೋಗಿದ್ದರಾ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿ: ಬಾದಾಮಿಯಿಂದ ಸ್ಪರ್ಧಿಸುವುದು ನನಗೆ ಮನಸ್ಸಿರಲಿಲ್ಲ. ಆದರೆ ಉತ್ತರ ಕರ್ನಾಟಕ ಭಾಗದ ಶಾಸಕ ಒತ್ತಡದ ಹಿನ್ನಲೆ ಸ್ಪರ್ಧಿಸುತ್ತಿರುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಲ್ಲಿ ಗೆಲವು ನಿಶ್ಚಿತ. ಬೆಳಗಾವಿಯಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ. ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ಬಿಜೆಪಿಯವರು […]

ಹಿಂಡಲಗಾ ಕಾರಾಗೃಹದಿಂದಲೇ ಐಜಿಪಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ

ಹಿಂಡಲಗಾ ಕಾರಾಗೃಹದಿಂದಲೇ ಐಜಿಪಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ

ಬೆಳಗಾವಿ: ಐಜಿಪಿ ಅಲೋಕಕುಮಾರ್ ಅವರಿಗೆ ಫೋನ್ ಕರೆ, ಹಾಗೂ ಸಂದೇಶ ಕಳುಹಿಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಹೊತ ಟ್ವೀಸ್ಟ್ ದೊರೆತಿದೆ. ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಮರಣದಂಡನೆ ಶಿಕ್ಷೆಗೆ ಗುರಿಯಾ ಕೇರಳ ಮೂಲದ  ಶಹಜಾಯ್ ಎಂಬಾತನೇ ಐಜಿಪಿ ಅಲೋಕ್‌ಕುಮಾರ್‌ರಿಗೆ ಬೆದರಿಕೆ ಕರೆ ಹಾಗೂ ಸಂದೇಶ ರವಾನಿಸಿರುವ ಆರೋಪಿ ಎನ್ನಲಾಗಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಎಪಿಎಂಸಿ ಪೊಲೀಸರು ಹಾಗೂ ಹಿಂಡಲಗಾ ಜೈಲಿನ […]

ಬೆಳಗಾವಿಯನ್ನ ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣ: ಹಂತಕನಿಗೆ ಜೀವಾವಧಿ ಶಿಕ್ಷೆ

ಬೆಳಗಾವಿಯನ್ನ ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣ: ಹಂತಕನಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದ ಮಹಿಳೆ ಹಾಗೂ ಇಬ್ಬರು ಪುಟ್ಟ ಮಕ್ಕಳ ಬರ್ಬರ ಹತ್ಯೆಗೈದ ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ  ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರವೀಣ ಭಟ್ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಮಹಿಳೆಯೊಂದಿಗೆ ಇದ್ದ ಅನೈತಿಕ ಸಂಬಂಧ ಗುಟ್ಟು ರಟ್ಟಾಗುತ್ತದೆ ಎಂಬ ದುಗುಡದಿಂದ 2015- ಆಗಸ್ಟ್ 16ರಂದು  ಮಕ್ಕಳ ಎದುರೇ  ಮಹಿಳೆಯನ್ನು ಕೊಲೆಗೈದಿದ್ದ, ಮಹಿಳೆ ಕೊಲೆ […]

ಬೆಳಗಾವಿ 18 ಕ್ಷೇತ್ರಗಳಲ್ಲಿಯೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ 18 ಕ್ಷೇತ್ರಗಳಲ್ಲಿಯೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್: ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿಯೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಸಹಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಮುಖಂಡರಲ್ಲಿದ್ದ ಭಿನ್ನಾಭಿಪ್ರಾಯ ಶಮನಗೊಳಿಸಲಾಗಿದೆ. ಎಲ್ಲರು ಸೇರಿ ಜಿಲ್ಲೆಯಲ್ಲಿ ಕನಿಷ್ಟ 14 ಸ್ಥಾನಗಳನ್ನಾದರು ಗೆಲ್ಲುವ ಗುರಿ ಹೊಂದಿದ್ದೇವೆ. ಅರ್ಹತೆ ಉಳ್ಳ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಅಖಾಡಕ್ಕೆ ಇಳಿಸಲಾಗುವುದು ಎಂದರು. ಸೂಕ್ತ ಅಭ್ಯರ್ಥಿಗಳನ್ನು […]

1 2 3 7