ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನಾಳೆ ಎಚ್.ಕೆ. ಪಾಟೀಲ ಅಧಿಕಾರ ಸ್ವೀಕಾರ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಣಿಯಾಗುತ್ತಿದ್ದು, ಇದರ ಮೊದಲ ಭಾಗವಾಗಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಎಚ್.ಕೆ. ಪಾಟೀಲ ನಾಳೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹೊಸದಾಗಿ ರಚಿಸಲಾಗಿರುವ ಪ್ರಚಾರ ಸಮಿತಿ ಇತರ ಪದಾಧಿಕಾರಿಗಳೂ ನಾಳೆಯಿಂದಲೇ ಕಾರ್ಯೋನ್ಮುಖಲಾಗಲಿದ್ದಾರೆ ಎಂದು ಪಕ್ಷದ ಮುಖಂಡ ಬಿ.ಎಲ್. ಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅರಮನೆ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ಅಧಿಕೃತ ಪ್ರಚಾರ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದೆ. ಉತ್ತಮ […]

ಕಾಂಗ್ರೆಸ್ 150 ಅಭ್ಯರ್ಥಿಗಳ ಪಟ್ಟಿ ಸಿದ್ದ?

ಕಾಂಗ್ರೆಸ್ 150 ಅಭ್ಯರ್ಥಿಗಳ ಪಟ್ಟಿ ಸಿದ್ದ?

ಬೆಂಗಳೂರು: ಚುನಾವಣೆ ದಿನಾಂಕ ನಿಗದಿಯಾದ ಮೊದಲೇ  ರಾಜ್ಯ ಜಾರಕಾರಣದಲ್ಲಿ ಭರಪೂರ ಚಟುವಟಿಕೆಗಳು ಆರಂಭವಾಗಿದ್ದು, ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ನಿಲ್ಲುತ್ತಾರೆ? ಯಾರು ಗೆಲ್ಲುತ್ತಾರೆ? ಎಂಬ ಕುತೂಹಲ ರಾಜ್ಯದ ಮತದಾರರಲ್ಲಿ ಮನೆ ಮಾಡಿದೆ. ಈ ನಡುವೆ ಸೂಕ್ತ ಅಭ್ಯರ್ಥಿಗಳ  ಆಯ್ಕೆಗಾಗಿ  ಇನ್ನಿಲ್ಲದ ಕಸರತ್ತು ನಡೆಸಿರುವ ರಾಜಕೀಯ ಪಕ್ಷಗಳು ಹೈ ಕಮಾಂಡ್ ನ ಅನುಮೋದನೆಗಾಗಿ ಕಾಯುತ್ತಿವೆ. ಇಗಾಗಲೇ  ಹಲವು ಸುತ್ತಿನ ಮಾತುಕತೆ ನಡೆಸಿರುವ   ಕಾಂಗ್ರೆಸ್ ನಾಯಕರು ಸಂಭಾವ್ಯ ಅಬ್ಯರ್ಥಿಗಳ ಪಟ್ಟಿಯನ್ನು ಸಿದ್ದ ಪಡಿಸಿ ಹೈ ಕಮಾಂಡ್ ಗೆ ಕಳುಹಿಸಿರುವ ಮಾಹಿತಿ […]

ಹಾಲಿ ಶಾಸಕರು ಸೋತರೆ ಜಿಲ್ಲಾಮಂತ್ರಿಗಳೆ ನೇರ ಹೊಣೆ: ಸಿಎಂ ಸಿದ್ದರಾಮಯ್ಯ

ಹಾಲಿ ಶಾಸಕರು ಸೋತರೆ ಜಿಲ್ಲಾಮಂತ್ರಿಗಳೆ ನೇರ ಹೊಣೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೀತಿ ಸಂಹಿತೆ ಉಲ್ಲಂಘಿಸದಂತೆ ಜಿಲ್ಲಾ ಮಂತ್ರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳ ಸಂಬಂಧ  ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿ,  ಹಾಲಿ ಶಾಸಕರು ಚನಾವಣೆಯಲ್ಲಿ ಸೋತರೆ ಜಿಲ್ಲಾ ಮಂತ್ರಿಯನ್ನ ನೇರ ಹೊಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹೈ ಕ ಭಾಗದ ಜಿಲ್ಲೆಗಳ ಜಿಲ್ಲಾ ಉಸ್ತುವಾರಿಗಳು, ಜಿಲ್ಲಾಧ್ಯಕ್ಷರ ಜೊತೆ ನಡೆದ ಸಭೆಯಲ್ಲಿ ಆಯಾ ಜಿಲ್ಲೆಗಳಲ್ಲಿರುವ ಕ್ಷೇತ್ರಗಳಲ್ಲಿ ಯಾರಿಗೆ […]

ಪರೀಕ್ಷೆ ನಿಗದಿಯಾಗಿದೆ, ಮೊದಲ ರ್ಯಾಂಕ್ ಬರೋದು ನಾವೇ: ದಿನೇಶ್ ಗುಂಡೂರಾವ್

ಪರೀಕ್ಷೆ ನಿಗದಿಯಾಗಿದೆ, ಮೊದಲ ರ್ಯಾಂಕ್ ಬರೋದು ನಾವೇ: ದಿನೇಶ್ ಗುಂಡೂರಾವ್

ಬೆಂಗಳೂರು: ಕಳೆದ ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸಿದ್ದು, ಚುನಾವಣೆಯಲ್ಲಿ ನಾವು ಮೊದಲ ರ್ಯಾಂಕ್ ನಲ್ಲಿ ಪಾಸಾಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗ ಸ್ವಾಗತಿಸಿದರು. ಎಲ್ಲ ಪಕ್ಷಗಳಿಗೂ ಇದು ಪರೀಕ್ಷೆ ಸಮಯ ನಿಗದಿಯಾಗಿದೆ. ಪರೀಕ್ಷೆಗೆ ನಾವೇಲ್ಲ ಸಿದ್ದ ಎಂದರು. ನಮ್ಮ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಉತ್ತಮ ಸೇವೆಸಲ್ಲಿಸಿದೆ. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯರ […]

ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್

ಹಾಲಿ ಕಾಂಗ್ರೆಸ್ ಶಾಸಕರಿಗೆ ಟಿಕೆಟ್: ಕೆಪಿಸಿಸಿ ಅಧ್ಯಕ್ಷ  ಪರಮೇಶ್ವರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್  ಹಾಲಿ ಕಾಂಗ್ರೆಸ್ ಶಾಸಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಗರದ ಹೊರವಯಲದಲ್ಲಿ ರೆಸಾರ್ಟ್ ವೊಂದರಲ್ಲಿ ನಡೆದ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಎಲ್ಲ ಕಾಂಗ್ರೆಸ್ ಶಾಸಕರಿಗೂ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಶಿಫಾರಸು ಮಾಡಲಾಗುದು ಎಂದು ತಿಳಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಇತ್ತೀಚಿಗೆ ಕಾಂಗ್ರೆಸ್ ಸೇರಿದ ಶಾಸಕ ಅಶೋಕ್ ಖೇಣಿಗೂ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಪಟ್ಟಿ ಕಳುಹಿಸಲಾಗಿದೆ. […]

ಎಐಸಿಸಿ ಕಾರ್ಯದರ್ಶಿ ಸತೀಶ, ಕೆಪಿಸಿಸಿ ಉಪಾಧ್ಯಕ್ಷ ವೀರಕುಮಾರ ಪಾಟೀಲರಿಗೆ ಸನ್ಮಾನ

ಎಐಸಿಸಿ ಕಾರ್ಯದರ್ಶಿ ಸತೀಶ, ಕೆಪಿಸಿಸಿ ಉಪಾಧ್ಯಕ್ಷ ವೀರಕುಮಾರ ಪಾಟೀಲರಿಗೆ ಸನ್ಮಾನ

ಬೆಳಗಾವಿ:  ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುಡಚಿ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮಸ್ಥರು ಮತ್ತು ಮುಖಂಡರು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಮತ್ತು ಕೆಪಿಸಿಸಿ ಉಪಾಧ್ಯಕ್ಷ ವೀರಕುಮಾರ ಪಾಟಿಲ ಅವರನ್ನು ಸತ್ಕರಿಸಲಾಯಿತು.  ಇದೇ ಸಂದರ್ಭದಲ್ಲಿ ಬಳ್ಳಾರಿ ನಾಲೆಯಿಂದ ಕುಡಚಿ ಗ್ರಾಮದ ರೈತರಿಗೆ ಆಗುತ್ತಿರುವ ತೊಂದರೆ ಮತ್ತು ಗ್ರಾಮದ ಜನರು ಎದುರಿಸುತ್ತೀರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.  ಮನವಿ ಸ್ವೀಕರಿಸಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಗ್ರಾಮದ […]

ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜೇಶ್ವರಿ ಪಾಟೀಲ ನೇಮಕ

ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜೇಶ್ವರಿ ಪಾಟೀಲ ನೇಮಕ

ಹಾವೇರಿ: ಹಾವೇರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ರಾಜೇಶ್ವರಿ ಪಾಟೀಲ ಅವರನ್ನು ನೇಮಕ ಮಾಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕ ಅವರು ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್‌ನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಮಹಿಳೆಯರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನ್ಯಾಯ ವೊದಗಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಅವರು ತಿಳಿಸಿದ್ದಾರೆ. Views: 378

ಅವಧಿ ಪೂರ್ವ ಚುನಾವಣೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

ಅವಧಿ ಪೂರ್ವ ಚುನಾವಣೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಚುನಾವಣೆ ವಿಷಯದಲ್ಲಿ ಅನಗತ್ಯವಾಗಿ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸತ್ತಿವೆ ಯಾವುದೇ ಕಾರಣಕ್ಕೂ ಅವಧಿ ಪೂರ್ವ ಚುನಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ನಿಗದಿಯಂತೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ನಡೆಯಲಿದೆ. ಅವಧಿಪೂರ್ವ ಚುನಾವಣೆ ಇಲ್ಲವೇ ಇಲ್ಲ. ಪ್ರತಿಪಕ್ಷಗಳ ಗೊಂದಲದ ಹೇಳಿಕೆಗೆ ತೆಲೆಕೆಡಿಸಿಕೊಳ್ಳಬೇಡಿ ಎಂದರು. ನೂತನ ಪಾಧಿಕಾರಿಗಳನ್ನ ಆಯ್ಕೆ  ಮಾಡಿದ ಹೈಕಮಾಂಡ್‍ಗೆ ಅಭಿನಂದನೆ ಸಲ್ಲಿಸಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಿಎಂ […]

ಎಸ್.ಆರ್.ಪಾಟೀಲ್ ರಿಗೆ ರವಿ ಪಾಟೀಲ್ ರಿಂದ ಅಭಿನಂದನೆ-ಚರ್ಚೆ

ಎಸ್.ಆರ್.ಪಾಟೀಲ್ ರಿಗೆ ರವಿ ಪಾಟೀಲ್ ರಿಂದ ಅಭಿನಂದನೆ-ಚರ್ಚೆ

ರಾಯಚೂರು: ಕೆಪಿಸಿಸಿ ಉತ್ತರ ಕರ್ನಾಟಕ ವಿಭಾಗದ  ಕಾರ್ಯಾಧ್ಯಕ್ಷ ಎಸ್ ಆರ್ ಪಾಟೀಲ್ ಅವರನ್ನು ರಾಯಚೂರಿನ ಕಾಂಗ್ರೆಸ್‌ ಮುಖಂಡ ರವಿ ಪಾಟೀಲ್ ಬೇಟಿ ಮಾಡಿ ಅಭಿನಂದಿಸಿದರು. ಗುರುವಾರದಂದು ಕೂಡಲ ಸಂಗಮದಲ್ಲಿ ಏರ್ಪಡಿಸಿದ್ದ ಎಸ್.ಆರ್.ಪಾಟೀಲ್ ಅವರ ಪದಗ್ರಹಣ ಹಾಗೂ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮನೆಗೆ ತೆರಳಿ ಬೇಟಿ ನೀಡಿದ ರವಿ ಪಾಟೀಲ ಅವರು   ಪಕ್ಷದ ಬಲವರ್ಧನೆ ಬಗ್ಗೆ ಪಾಟೀಲ ಅವರೊಂದಿಗೆ  ಚರ್ಚೆ ನಡೆಸಿದ್ದಾರೆ. ಗುರುವಾರ ನಡೆದ ಸಮಾವೇಶದಲ್ಲಿ  ರವಿ ಪಾಟೀಲ್ ನೇತೃತ್ವದ 8೦೦ಕ್ಕೂ ಅಧಿಕ ಕಾಂಗ್ರೆಸ್  ಕಾರ್ಯಕರ್ತರು […]

ಒಣ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಪಕ್ಷ ಸಂಘಟನೆ ಮುಂದಾಗಿ : ದಿನೇಶ್ ಗುಂಡೂರಾವ್

ಒಣ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಪಕ್ಷ ಸಂಘಟನೆ ಮುಂದಾಗಿ : ದಿನೇಶ್ ಗುಂಡೂರಾವ್

ಪಾಂಡವಪುರ: ತಾಲ್ಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ತಮ್ಮ ಒಣ ಪ್ರತಿಷ್ಠೆಗಳನ್ನು ದೂರವಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು, ಪಕ್ಷ ವಿರೋಧಿ ಚಟುವಟಿಕೆ ಮಾಡುವುದು ಕಂಡು ಬಂದರೆ ಅಂತಹವರನ್ನು ಯಾವುದೇ ಮುಲಾಜಿಲ್ಲದೆ ಪಕ್ಷದಿಂದ ಹೊರಹಾಕಲಾಗುವುದು ಎಂದು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಸಂದೇಶ ನೀಡಿದರು. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ರೈತ ಮತ್ತು ಕೃಷಿ ಕಾರ್ಮಿಕ ಕಾಂಗ್ರೆಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರ ಒಣ ಪ್ರತಿಷ್ಠೆ, ಕಚ್ಚಾಟ, ಕಿತ್ತಾಟಗಳಿಂದ […]