ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಬಜೆಟ್ ಅಧಿವೇಶನಕ್ಕೂ ಮುನ್ನ ಮೋದಿ ಏನು ಹೇಳಿದ್ರು ಗೊತ್ತಾ ?!

ಹೊಸದಿಲ್ಲಿ:ಎಲ್ಲಾ ಮಹತ್ವದ ವಿಷಯಗಳ ಮೇಲೆ ಚರ್ಚೆ ನಡೆಸಲು ತಮ್ಮ ಸರಕಾರ ಉತ್ಸುಕವಾಗಿದ್ದು, ಎಲ್ಲ ಸಂಸದರು ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ತಮ್ಮ ಸರಕಾರದ ಕಡೆಯ ಬಜೆಟ್ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ಸಂಸತ್ತಿನ ಪ್ರತಿಯೊಂದು ಕಲಾಪಗಳನ್ನೂ ದೇಶದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಹಾಗಾಗಿ ಸಂಸದರು ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಮೋದಿ, […]

ಯಮಕನಮರಡಿ ಕ್ಷೇತ್ರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ ಕ್ಷೇತ್ರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಶಾಸಕ ಸತೀಶ ಜಾರಕಿಹೊಳಿ

ಬೆಳಗಾವಿ: ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ 63 ಜನ ಫಲಾನುಭವಿಗಳಿಗೆ ಅರಣ್ಯ ಜಮೀನು ಹಕ್ಕು ಪತ್ರವನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಗುರುವಾರ ವಿತರಿಸಿದರು. ನಗರದ ಅವರ ಗೃಹ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 63 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗನೂರ, ಹಾಗೂ ಇಲಾಖೆ ಸಿಬ್ಬಂದಿಗಳು ಇತರರು ಇದ್ದರು. Views: 668

ಆರ್‌ಎಸ್‌ಎಸ್‌ ರಾಷ್ಟ್ರಾಭಿಮಾನಿಯಾಗಿದ್ದರೆ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಲಿ

ಆರ್‌ಎಸ್‌ಎಸ್‌ ರಾಷ್ಟ್ರಾಭಿಮಾನಿಯಾಗಿದ್ದರೆ ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡಲಿ

ಹುಬ್ಬಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತೆ ಮಾಹಾದೇವಿ ಹೇಳಿಕೆ ಹುಬ್ಬಳ್ಳಿ: ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಲಿಂಗಾಯತಕ್ಕಿಂತ ಸಣ್ಣ ಧರ್ಮಗಳಿಗೆ ಮಾನತ್ಯೆ ದೊರೆತಿದೆ. ಇದೇ ರೀತಿ ಲಿಂಗಾಯತ ಧರ್ಮಕ್ಕೂ ಮಾನ್ಯತೆ ನೀಡಬೇಕು ಎಂದು ಕೂಡಲ ಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಒತ್ತಾಯಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ. ಲಿಂಗಾಯತ ಧರ್ಮ 12ನೆಯ ಶತಮಾನದಲ್ಲಿ […]

ಪೊಲೀಸರ ಒತ್ತಡ ನಿರ್ವಹಣೆಗೆ ತರಬೇತಿ ಅಗತ್ಯ : ಡಿಜಿ-ಐಜಿಪಿ ನೀಲಮಣಿ.ಎನ್. ರಾಜು

ಪೊಲೀಸರ ಒತ್ತಡ ನಿರ್ವಹಣೆಗೆ ತರಬೇತಿ ಅಗತ್ಯ : ಡಿಜಿ-ಐಜಿಪಿ ನೀಲಮಣಿ.ಎನ್. ರಾಜು

ಖಾನಾಪೂರ ಪೊಲೀಸ್ ತರಬೇತಿ ಶಾಲೆಯ ರಜತ ಮಹೋತ್ಸವ ಬೆಳಗಾವಿ: ಪೊಲೀಸರು ಇಂದು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಒತ್ತಡ ನಿವಾರಣೆಗೆ ಪ್ರಶಿಕ್ಷಣಾರ್ಥಿಗಳು ಹಾಗೂ ಪೊಲೀಸರಿಗೆ ತರಬೇತಿ ಅಗತ್ಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಹೇಳಿದರು. ಖಾನಾಪೂರದ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ತರಬೇತಿ ಶಾಲೆಯ ರಜತ ಮಹೋತ್ಸವ ಹಾಗೂ 23ನೇ ತಂಡದ ನಾಗರಿಕ ಪೊಲೀಸ್ ಕಾನ್ಸ್ ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಇಲಾಖೆಯಲ್ಲಿ ಉತ್ತಮ […]

ಚಿಕ್ಕೋಡಿ ಜಿಲ್ಲೆ ರಚನೆಯಾಗದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ: ಪಿ. ರಾಜೀವ

ಚಿಕ್ಕೋಡಿ ಜಿಲ್ಲೆ ರಚನೆಯಾಗದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ:  ಪಿ. ರಾಜೀವ

ಚಿಕ್ಕೋಡಿ: ಜನರ ಹಿತ ದೃಷ್ಟಿಯಿಂದ ಬೇಗ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕು. ಇಲ್ಲವಾದರೇ ತಾವು ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕುಡಚಿ ಕ್ಷೇತ್ರದ ಜನರೊಂದಿಗೆ ವೇದಿಕೆಗೆ ಬಂದು ಮಾ.20 ರಿಂದ ಉಪವಾಸ ಧರಣಿ ಆರಂಭಿಸಬೇಕಾಗುತ್ತದೆ ಎಂದು ಕುಡಚಿ ಶಾಸಕ ಪಿ.ರಾಜೀವ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪಟ್ಟಣದ ಮಿನಿ ವಿಧಾನಸೌಧ ಎದುರು ಕಳೆದ 37 ದಿನಗಳಿಂದ ನಡೆಯುತ್ತಿರುವ ಧರಣಿ ಉಪವಾಸ ಸತ್ಯಾಗ್ರಹದಲ್ಲಿ ಬುಧುವಾರ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು. ಜಾನಪದ ವಿದ್ವಾಂಸ ಜ್ಯೋತಿ ಹೊಸೂರ ಮಾತನಾಡಿ, […]

ಸಂವಿಧಾನ ಬದಲಿಸಲು ಹೊರಟಿರುವ ಬಂಡವಾಳ ಶಾಯಿಗಳಿಗೆ ತಕ್ಕ ಪಾಠ ಕಲಿಸಿ: ಸಚಿವ ರಮೇಶ ಜಾರಕಿಹೊಳಿ

ಸಂವಿಧಾನ ಬದಲಿಸಲು ಹೊರಟಿರುವ ಬಂಡವಾಳ ಶಾಯಿಗಳಿಗೆ ತಕ್ಕ ಪಾಠ ಕಲಿಸಿ: ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಂಡವಾಳ ಶಾಯಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು  ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಗೋಕಾಕ ಮತಕ್ಷೇತ್ರದ ಮರಡಿಮಠ ಗ್ರಾಮದಲ್ಲಿ ರವಿವಾರ ಜನರನ್ನುದ್ಧೇಶಿಸಿ ಮಾತನಾಡಿದ ಅವರು,  ಬಿಜೆಪಿ ಪಕ್ಷ ಬಂಡವಾಳ ಶಾಯಿಗಳ ಪರವಿದ್ದು ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಸುಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದು,ಇವರಿಗೆ ತಕ್ಕ ಪಾಠ ಕಲಿಸುವಂತೆ ಜನರಿಗೆ ಕರೆ ನೀಡಿದರು. ಸಂವಿಧಾನವನ್ನು ಬದಲಿಸುವ ಹಾಗೂ ಇಂದಿರಾ ಗಾಂಧಿಯವರು ಜಾರಿಗೆ […]

ಸಾಲ ಪಡೆದು ವಂಚನೆ: ನಟಿ ಸಿಂಧು ಮೆನನ್ ವಿರುದ್ದ ದೂರು ದಾಖಲು

ಸಾಲ ಪಡೆದು ವಂಚನೆ: ನಟಿ ಸಿಂಧು ಮೆನನ್ ವಿರುದ್ದ ದೂರು ದಾಖಲು

  ಬೆಂಗಳೂರು: ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ನಟಿ ಸಿಂಧು ಮೆನನ್ ಸೇರಿ ಅವರ ಕುಟುಂಬಸ್ಥರ ಮೇಲೂ ಬೆಂಗಳೂರಿನ  ಆರ್ ಎಂಸಿ ಯಾರ್ಡ್  ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ. ಸಿಂಧು ಮೆನನ್ ಹಾಗೂ ಕುಟುಂಬಸ್ಥರು ನಕಲಿ ದಾಖಲೆ ಸೃಷ್ಠಿಸಿ ಕಾರು ಖರೀದಿಗೆ 36 ಲಕ್ಷ ರೂ.  ಬರೋಡಾ ಬ್ಯಾಂಕ್​ನಿಂದ ಸಾಲ ಪಡೆದು ವಂಚಿಸಿದ್ದಾರೆ  ಎಂದು ಬರೋಡಾ ಬ್ಯಾಂಕ ಮ್ಯಾನೇಜರ್ ರಮೇಶ್ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಸಿಂಧು ಮೆನನ್ ಅವರು ನಕಲಿ ದಾಖಲೆಗಳನ್ನು ನೀಡಿ ಸಾಲ […]

ಚಿಕ್ಕೋಡಿ: ಸಾಲ ಮಾಡಿ ಶೌಚಾಲಯ ನಿರ್ಮಿಸಿದ ವೃದ್ದೆಗೆ ಸನ್ಮಾನಿಸಿದ ಜಿಪಂ ಸಿಇಒ

ಚಿಕ್ಕೋಡಿ: ಸಾಲ ಮಾಡಿ ಶೌಚಾಲಯ ನಿರ್ಮಿಸಿದ ವೃದ್ದೆಗೆ ಸನ್ಮಾನಿಸಿದ ಜಿಪಂ ಸಿಇಒ

ಚಿಕ್ಕೋಡಿ: ಪ್ರತಿಯೊಂದು ಕುಟುಂಬದವರು ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಂಡು ಬಾರವಾಡ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಬೇಕು ಎಂದು ಜಿ.ಪಂ.ಸಿಇಓ ಆರ್.ರಾಮಚಂದ್ರನ್ ತಿಳಿಸಿದರು. ತಾಲೂಕಿನ ಬಾರವಾಡ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ  ಗುರುವಾರ ಬಾರವಾಡ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಚಿಕ್ಕಮನೆಯಲ್ಲಿ ಸಾಲ ಮಾಡಿ ಶೌಚಾಲಯ ನಿರ್ಮಿಸಿಕೊಂಡ 85 ವರ್ಷದ ವೃದ್ಧೆ ಬಾಳಾಬಾಯಿ ಸಂತ್ರಾಮ ಲೋಹಾರ ಅವರನ್ನು ಸನ್ಮಾನಿಸಿ ರಾಮಚಂದ್ರನ್ ಅವರು ಮಾತನಾಡಿದರು. ವಿದ್ಯಾರ್ಥಿಗಳು ಅತ್ಯುತ್ತಮ ಶಿಕ್ಷಣ ಪಡೆದು ಎ.ಪಿ.ಜಿ ಅಬ್ದುಲ್ ಕಲಾಂ ಅಂತೆ ಮಹಾನ್ ವ್ಯಕ್ತಿಗಳಾಗಬೇಕು. […]

ಸುರಪುರ: ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

ಸುರಪುರ: ನೂರಾರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ

ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ತಿಮ್ಮಾಪುರ ಗ್ರಾಮದ ಬೋವಿ ಜನಾಂಗದ ನೂರಾರು ಬಿಜೆಪಿ ಕಾರ್ಯಕರ್ತರು  ಕಾಂಗ್ರೆಸ್ ಸೇರ್ಪಡೆಯಾದರು. ಬಳಕಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದು,  ಕಾರ್ಯಕರ್ತರರು ಬಿರುಸಿನಿಂದ ಪ್ರಚಾರ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಭೀಮಣ್ಣ ಪೂಜಾರಿ, ಮೌನೇಶ ವಡ್ಡರ, ನಾಗಪ್ಪ ವಡ್ಡರ ಕಾಲೋನಿ, ಪರಶುರಾಮ ಪೂಜಾರಿ, ಶರಣಪ್ಪ ಕಟ್ಟಿಮನಿ, ಭೀಮಣ್ಣ ಕಟ್ಟಿಮನಿ, ಮರೇಪ್ಪ ಶಾರದಳ್ಳಿ, ನಾಗರಾಜ ಕಟ್ಟಿಮನಿ, ನಾಗಪ್ಪ […]

ವೀರಶೈವರದು ಒಂದು ಉಪಜಾತಿ, ಗುರು ವಿರಕ್ತರು ಒಂದಾಗುವುದು ಕಷ್ಟ: ತೋಂಟದ ಶ್ರೀ

ವೀರಶೈವರದು ಒಂದು ಉಪಜಾತಿ, ಗುರು ವಿರಕ್ತರು ಒಂದಾಗುವುದು ಕಷ್ಟ: ತೋಂಟದ ಶ್ರೀ

ಬೆಂಗಳೂರು: ನಾಗರ ಪಂಚಮಿಯಂದು ಕಲ್ಲಿನ ನಾಗರಕ್ಕೆ  ಬಾಳೆಹೊನ್ನೂರು ಪೀಠದ ವೀರಸೋಮೇಶ್ವರ ಶ್ರೀಗಳು ಹಾಲೆರೆದಿದ್ದಾರೆ.  ಹಾಲು  ಕುಡಿಯುವುದಕ್ಕಾಗಿಯೇ ಇರುವುದೇ ಹೊರತು ವ್ಯರ್ಥ ಮಾಡಲು ಅಲ್ಲ. ಆಚರಣೆ ಬೇರೆಯಾದರೆ ಒಂದಾಗುವುದು ಹೇಗೆ,  ವಿರಕ್ತ ಮಠಾಧೀಶರು  ಪಂಚಪೀಠಗಳ ಸ್ವಾಮಿಗಳು ಎಂದಿಗೂ ಒಂದಾಗುವುದಿಲ್ಲ ಎಂದು  ಗದಗ  ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಲಿಂಗಾಯತ ಸ್ವತಂತ್ರ ಧರ್ಮ ಚಿಂತನಾ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಂಚಪೀಠಾಧೀಶ್ವರರು ವಿರಕ್ತಮಠಾಧೀಶರು ಒಂದೇ ಆಗಿದ್ದೇವೆ. ನಾವೇನೂ ಕೌರವ-ಪಾಂಡವರಂತೆ ಅಲ್ಲ.  ಸಮಾವೇಶ, […]